ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಸೋಂಕು ಹರಡಿದ ಕುರಿತು 3 ಅಂಶ ಗುರುತು

ಮೈಸೂರು: ಇಡೀ ಜಿಲ್ಲೆಗೆ ಆತಂಕಕ್ಕೆ ಕಾರಣವಾಗಿದ್ದ ನಂಜನಗೂಡು ತಾಲ್ಲೂಕಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡಿದ್ದು ಹೇಗೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್ ಅವರು ಮೂರು ಅಂಶಗಳನ್ನು ಗುರುತಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ನಂಜನಗೂಡಿನ ಜ್ಯುಬಿಲಿಯೆಂಟ್ ಪ್ರಕರಣದಲ್ಲಿ ಮೂರು ಅಂಶಗಳನ್ನು ಗುರುತಿಸಿದ್ದೇವೆ. ಬೆಂಗಳೂರಿನಲ್ಲಿ ತಬ್ಲಿಘಿ ಮಾದರಿಯ ಸಭೆ ನಡೆದಿತ್ತು. ಆ ಸಭೆಗೆ ಜ್ಯುಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ ಎಂಬುದು ಮೊದಲ ಅಂಶ.

ಎರಡನೇ ಅಂಶ ಆಡಿಟರ್ ಗಳು ಜ್ಯುಬಿಲಿಯೆಂಟ್‌ಗೆ ಬಂದಿದ್ದರು. ಮೂರನೇ ಅಂಶ ಜ್ಯುಬಿಲಿಯೆಂಟ್‌ನ ಅಧಿಕಾರಿಗಳು ಬೆಂಗಳೂರಿಗೆ ಹೋಗಿ ಬಂದಿದ್ದಾರೆ. ಈ‌ 3 ಕಾರಣಗಳಲ್ಲಿ ಯಾವುದೋ ಒಂದು ಕಾರಣದಿಂದ ಸೋಂಕು ಬಂದಿರಬಹುದು. ಪೊಲೀಸರ ತನಿಖಾ ವರದಿಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹರ್ಷಗುಪ್ತ ಅವರ ತನಿಖಾ ವರದಿ ನನ್ನ ಕೈ ಸೇರಿಲ್ಲ. ಆದರೆ ಅವರು ತನಿಖೆಗೆ ಒಂದು ತಿಂಗಳು ತಡವಾಗಿದೆ ಎಂದು ಹೇಳಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.

Scroll to Top