ಮೈಸೂರು: ಮೈಸೂರು ರೈಲು ಯಾರ್ಡ್ ಹಾಗೂ ಚಾಮರಾಜನಗರ ಮುಖ್ಯ ಮಾರ್ಗದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂನ್ 16ರಿಂದ 24ರವರೆಗೆ ರೈಲುಗಳ ಸಂಚಾರದಲ್ಲಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ಲಾಟ್ ಫಾರಂ ಸಂಖ್ಯೆ 5 ಮತ್ತು 6 ರಿಂದ ಚಾಮರಾಜನಗರ ಕಡೆಗೆ ಸಂಪರ್ಕ ಕಲ್ಪಿಸುವುದನ್ನು ಯಾರ್ಡ್ ಮರುವಿನ್ಯಾಸ ಕಾಮಗಾರಿ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸದ್ಯ ಪ್ಲಾಟ್‍ಫಾರಂ 5 ಮತ್ತು 6ಕ್ಕೆ ಬರುವ ರೈಲುಗಳು ಚಾಮರಾಜನಗರ ಕಡೆ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ಲಾಟ್‍ಫಾರಂ 1 ರಿಂದ 4 ರವರೆಗಿನ ರೈಲುಗಳನ್ನು ಮಾತ್ರ ಚಾಮರಾಜನಗರ ಕಡೆ ವಿಸ್ತರಿಸಬಹುದಾಗಿತ್ತು. ಚಾಮರಾಜನಗರ ಮಾರ್ಗಕ್ಕೆ ಪ್ಲಾಟ್‍ಫಾರಂ 5 ಮತ್ತು 6 ಅನ್ನು ಸಂಪರ್ಕಿಸುವುದರಿಂದ ಅಶೋಕಪುರಂವರೆಗೆ ಹೆಚ್ಚಿನ ರೈಲುಗಳನ್ನು ವಿಸ್ತರಿಸಲು ಅನುಕೂಲವಾಗಲಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿಯೂ ನಡೆಯುತ್ತಿದೆ. ವಿವಿಧ ಮಾರ್ಗಗಳಲ್ಲಿ ಏಕಕಾಲದಲ್ಲಿ ಆಗಮಮಿಸುವ ಮತ್ತು ನಿರ್ಗಮಿಸುವ ರೈಲುಗಳಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ, ಮೈಸೂರಿನಲ್ಲಿ ಹೊರವಲಯ ಸಿಗ್ನಲ್‍ನಲ್ಲಿ ಆಗಮನದ ರೈಲುಗಳು ಕಾಯುವುದು ಸ್ವಲ್ಪ ಕಡಿಮೆಯಾಗಲಿದೆ.
ರದ್ದಾದ ರೈಲುಗಳು:
- 16ರಿಂದ 23ರವರೆಗೆ ಚಾಮರಾಜ ನಗರ – ಮೈಸೂರು ಪ್ಯಾಸೆಂಜರ್ (56201),
- ಮೈಸೂರು – ಯಶವಂತಪುರ ಪ್ಯಾಸೆಂಜರ್ (56216)
- ಯಶವಂತಪುರ – ಸೇಲಂ ಪ್ಯಾಸೆಂಜರ್ (56242),
- ಮೈಸೂರು – ಚಾಮರಾಜನಗರ ಪ್ಯಾಸೆಂಜರ್ (56202),
- ಚಾಮರಾಜನಗರ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56281),
- ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಪ್ಯಾಸೆಂಜರ್ (56227),
- ಮೈಸೂರು– ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56231),
- ಕೆಎಸ್ಆರ್ ಬೆಂಗಳೂರು – ಮೈಸೂರು ಪ್ಯಾಸೆಂಜರ್ (56238),
- ಮೈಸೂರು – ಚಾಮರಾಜನಗರ ಪ್ಯಾಸೆಂಜರ್ (56204),
- ಚಾಮರಾಜನಗರ – ಮೈಸೂರು ಪ್ಯಾಸೆಂಜರ್ (56203),
- ಮೈಸೂರು – ಕೆಎಸ್‌ಆರ್ ಬೆಂಗಳೂರು (56237),
- ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್ (56223),
- ಮೈಸೂರು – ತಾಳಗುಪ್ಪ ಪ್ಯಾಸೆಂಜರ್ (56276),
- ಮೈಸೂರು – ಚಾಮರಾಜನಗರ ಪ್ಯಾಸೆಂಜರ್ (56208),
- ಚಾಮರಾಜನಗರ – ಮೈಸೂರು ಪ್ಯಾಸೆಂಜರ್ (56209),
- ಮೈಸೂರು – ನಂಜನಗೂಡು ಪ್ಯಾಸೆಂಜರ್ (56206),
- ನಂಜನಗೂಡು – ಮೈಸೂರು ಪ್ಯಾಸೆಂಜರ್ (56205),
- ಮಾಲ್ಗುಡಿ ಎಕ್ಸ್‌ಪ್ರೆಸ್ ಮೈಸೂರು – ಯಲಹಂಕ (16023),
- ಮಾಲ್ಗುಡಿ ಎಕ್ಸ್‌ಪ್ರೆಸ್ ಯಲಹಂಕ – ಮೈಸೂರು (16024),
- ರಾಜ್ಯ ರಾಣಿ ಎಕ್ಸ್‌ಪ್ರೆಸ್ ಮೈಸೂರು – ಕೆಎಸ್‌ಆರ್ ಬೆಂಗಳೂರು (16557),
- ರಾಜ್ಯರಾಣಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು– ಮೈಸೂರು (16558) ರದ್ದಾಗಿವೆ.
- 17ರಿಂದ 24ರವರೆಗೆ ಸೇಲಂ– ಯಶವಂತಪುರ ಪ್ಯಾಸೆಂಜರ್ (56241),
- ಯಶವಂತಪುರ – ಮೈಸೂರು ಪ್ಯಾಸೆಂಜರ್ (56215),
- ಶಿವಮೊಗ್ಗ– ಕೆಎಸ್‌ಆರ್ ಪ್ಯಾಸೆಂಜರ್ (56228),
- ಕೆಎಸ್ಆರ್ ಬೆಂಗಳೂರು– ಚಾಮರಾಜನಗರ ಪ್ಯಾಸೆಂಜರ್ (56282),
- ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56224),
- ಕೆಎಸ್ಆರ್ ಬೆಂಗಳೂರು – ಮೈಸೂರು ಪ್ಯಾಸೆಂಜರ್ (56232),
- ತಾಳಗುಪ್ಪ – ಮೈಸೂರು ಪ್ಯಾಸೆಂಜರ್ (56275) ಸಂಚಾರ ಇರುವುದಿಲ್ಲ.
- ಜೂನ್ 21ರಂದು ಮೈಸೂರು – ರೇನಿಗುಂಟಾ ಎಕ್ಸ್‌ಪ್ರೆಸ್ (11065),
- 22ರಂದು ರೇನಿಗುಂಟಾ – ಮೈಸೂರು ಎಕ್ಸ್‌ಪ್ರೆಸ್ (11066) ರದ್ದಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.