ಆಷಾಢ ಶುಕ್ರವಾರಕ್ಕೆ ತಯಾರಾಗಿದೆ ಬರೋಬ್ಬರಿ 35 ಸಾವಿರ ಲಡ್ಡು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಸಿಹಿತಿಂಡಿ ಸಿದ್ಧವಾಗಿದ್ದು ಬರೋಬ್ಬರಿ 35 ಸಾವಿರ ಲಡ್ಡು ತಯಾರಿಸಲಾಗಿದೆ.

ನಗರದ ಚಾಮುಂಡೇಶ್ವರಿ ಸೇವಾ ಬಳಗದವರು ಲಡ್ಡು ವಿತರಣೆ ಮಾಡುತ್ತಿದ್ದು ಕಳೆದ 16ನೇ ವರ್ಷಗಳಿಂದ ಸತತವಾಗಿ ಆಷಾಡ ಶುಕ್ರವಾರದಂದು ಸಿಹಿ ಹಂಚುತ್ತಾ ಬಂದಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನಗರದ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಲಡ್ಡು ವಿತರಣೆ ಮಾಡಲಿದ್ದು ಇದಕ್ಕಾಗಿ 35 ಸಾವಿರ ಲಡ್ಡು ತಯಾರಿಸಲಾಗಿದೆ.

ನಗರದ ಜೆಪಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಲಾಡು ತಯಾರಿ ನಡೆದಿದ್ದು. ಸುಮಾರು 2 ಲಕ್ಷ ವೆಚ್ಚದಲ್ಲಿ 30 ಮಂದಿ ಬಾಣಸಿಗರಿಂದ 35 ಸಾವಿರ ಲಾಡು ತಯಾರಾಗಿದೆ. ಇದನ್ನು ಮೊದಲನೇ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಭಕ್ತರಿಗೆ ಲಾಡು ವಿತರಣೆ ಮಾಡಲಾಗುತ್ತದೆ. (ಜುಲೈ 5 ರಂದು ಮೊದಲನೇ ಆಷಾಢ ಶುಕ್ರವಾರ)

ಲಡ್ಡು ತಯಾರಿಕೆಗೆ 450 ಕೆಜಿ ಕಡ್ಲೆ ಹಿಟ್ಟು, 60ಕೆಜಿ ಗೋಡಂಬಿ, 10ಕೆಜಿ ಬಾದಾಮಿ. 10ಕೆಜಿ ಸ್ಲೈಸ್ ಬಾದಾಮಿ. 10ಕೆಜಿ ಪಿಸ್ತಾ, 750ಕೆಜಿ ಸಕ್ಕರೆ, 50 ಬೂರ ಸಕ್ಕರೆ, 3 ಟಿನ್ ನಂದಿನಿ ತುಪ್ಪ, 25 ಟಿನ್ ಅಡುಗೆ ಎಣ್ಣೆ, 30 ಕೆಜಿ ಖರ್ಜುರ , 30 ಕೆಜಿ ಸ್ಲೈಸ್ ಖರ್ಜುರ ಬಳಸಲಾಗಿದೆ.

Scroll to Top