
ಮೈಸೂರು: ಮೈಸೂರಿನಲ್ಲಿ ಮೂರನೇ ಕೊರೋನಾ ಸೋಂಕು ಧೃಡ. 35 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಸೋಂಕಿತ ನಂಜನಗೂಡಿನಲ್ಲಿ ಇವರು ಔಷಧ ಉತ್ಪಾದನಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಯಾವುದೇ ಪ್ರವಾಸ ಮಾಡಿರಲಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಇದುವರೆಗೂ ವಿದೇಶ ಪ್ರವಾಸದಿಂದ ಬಂದವರಲ್ಲಿ ಮಾತ್ರವೇ ಕೋವಿಡ್ ಕಾಯಿಲೆ ಕಂಡು ಬಂದಿತ್ತು. ಆದರೆ, ಈಗ ಯಾವುದೇ ಪ್ರಯಾಣ ನಡೆಸದವರಲ್ಲಿಯೂ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನು ಈತ 7 ಜನರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವುದಾಗಿ ತಿಳಿದುಬಂದಿದೆ. ಆ 7 ಮಂದಿಗು ಹೋಮ್ ಕ್ವಾರೈಂಟೈನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಗು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಎಂದು ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

You must be logged in to post a comment.