ನಂಜನಗೂಡಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್: 12ಕ್ಕೇರಿದ ಸೋಂಕಿತರ ಸಂಖ್ಯೆ

ಮೈಸೂರು: ನಂಜನಗೂಡಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ವೈರಸ್ ಇರುವುದು ಧೃಡಪಟ್ಟಿದೆ. ಈ ಬಗ್ಗೆ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಅಧಿಕಾರಿಗಳ‌ ಜೊತೆ ಸಭೆ ನಡೆಸಿದ್ದ ಅವರು ಸಭೆ ನಂತರ ಮತ್ತೆ ನಾಲ್ಕು ಪ್ರಕರಣ ಪಾಸಿಟಿವ್ ಇದೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಒಟ್ಟು 12 ಪ್ರಕರಣ ಇದೆ. ಅದರಲ್ಲಿ 2 ಪ್ರಕರಣ ಹೊರಗಿನಿಂದ ಬಂದವರದ್ದು. ಉಳಿದ 10 ಪ್ರಕರಣ ಜುಬಿಲೆಂಟ್ಸ್ ಕಾರ್ಖಾನೆ ನೌಕರರು. ಮೂರನೆ ಸೋಂಕಿತನಿಂದ 9 ಮಂದಿಗೆ ಸೋಂಕು ಬಂದಿದೆ. ಅದರನ್ನ ಬಿಟ್ಟರೆ ಇನ್ನೆಲ್ಲಿ ಸೋಂಕು ಪತ್ತೆ ಆಗಿಲ್ಲ ಎಂದು ತಿಳಿಸಿದರು.

ಮೊನ್ನೆಯಷ್ಟೆ ನಂಜನಗೂಡಿನ ಜುಬಿಲೆಟ್ಸ್ ಕಾರ್ಖಾನೆಯ ಐವರು ಕಾರ್ಮಿಕರಿಗೆ ಕೊರೋನಾ ಇರುವುದು ತಿಳಿದುಬಂದಿತ್ತು.

Dept of Information & Public relations, Mysore ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮಾರ್ಚ್ 30, 2020

Leave a Comment

Scroll to Top