ಮೈಸೂರಿನಲ್ಲಿ ಇಂದು 4 ಕೊರೋನಾ ಪಾಸಿಟಿವ್ ಬರುವ ಸಾಧ್ಯತೆ

ಮೈಸೂರು: ಮೈಸೂರಿನಲ್ಲಿ ಇಂದು ನಾಲ್ವರಿಗೆ ಕೊರೋನಾ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ತಿಳಿಸಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಇಂದು ನಾಲ್ಕು ಪಾಸಿಟಿವ್ ಬರುವ ಸಾಧ್ಯತೆ ಇದೆ. ಎಲ್ಲ ಪಾಸಿಟಿವ್‌ಗಳು ಪ್ರೈಮರಿ ಸಂಪರ್ಕದಿಂದಲೇ ಬಂದಿವೆ. ತಮಿಳುನಾಡಿನ ಸಂಪರ್ಕದ ನಾಲ್ವರಲ್ಲಿ ಕೊರೊನಾ ಸೋಂಕು ತಗುಲಿದೆ. ಇಂದು ಸಂಜೆಯ ಬುಲೆಟಿನ್‌ನಲ್ಲಿ ಘೋಷಣೆ ಆಗಲಿದೆ ಎಂದು ತಿಳಿಸಿದರು.

ನಿತ್ಯ ಹೊರರಾಜ್ಯದಿಂದ ಸರಾಸರಿ 150ಕ್ಕು ಹೆಚ್ಚು ಜನ ಬರುತ್ತಿದ್ದಾರೆ. ಬಂದವರನ್ನ ಕ್ವಾರಂಟೈನ್ ಮಾಡುತ್ತಿದ್ದೇವೆ. ಅವರನ್ನ ಪರೀಕ್ಷೆಗೆ ಒಳಪಡಿಸಿ ಸೋಂಕು ಲಕ್ಷಣ ಇದ್ದರೆ ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದು ಮಾಹಿತಿ ನಿಡಿದ್ದಾರೆ.

ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದ ಅಜ್ಜಿ ಮೊಮ್ಮನಿಗೆ ಮತ್ತೆ ಸೋಂಕು?

ಇನ್ನು ನಗರದ ಇಟ್ಟಿಗೆಗೂಡಿನಲ್ಲಿ ಅಜ್ಜಿ ಮೊಮ್ಮಗನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅಜ್ಜಿ ಮೊಮ್ಮಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನವೇ ಮತ್ತೆ ಸೊಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

Scroll to Top