ಮೈಸೂರಿನಲ್ಲಿ 50ಕ್ಕೂ ಹೆಚ್ಚು ಕಂಟೈನ್’ಮೆಂಟ್ ಝೋನ್ ಇವೆ: ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಮೈಸೂರು: ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರಿನಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಕಂಟೈನ್ಮೆಂಟ್ ಜೋನ್ ಗಳನ್ನು ಮಾಡಲಾಗಿದೆ. ಕಂಟೈನ್ಮೆಂಟ್ ಜೋನ್ ಗಳನ್ನು ಆಯಾ ಬೀದಿಗೆ ಮಾತ್ರ ಸೀಮಿತ ಮಾಡಲಾಗುತ್ತಿದೆ. ಅಪಾರ್ಟ್ ಮೆಂಟ್ ಹಾಗೂ ಸ್ಲಂ ಏರಿಯಾಗಳಲ್ಲಿ ಭಿನ್ನವಾಗಿ ಕಂಟೈನ್ಮೆಂಟ್ ಜೋನ್ ಮಾಡಲಾಗುತ್ತಿದೆ ಎಂದರು.

ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮದುವೆ, ಧಾರ್ಮಿಕ ಸಮಾರಂಭಗಳಿಂದ ದೂರ ಉಳಿಯಬೇಕು. ಸಮುದಾಯವಾಗಿ ಕೊರೊನಾ ಹರಡದ ರೀತಿ ಎಲ್ಲರೂ ಎಚ್ಚರಿಕೆ ವಹಿಸಬೇಕು. ಈ ಸಮಯ ನಮಗೂ ಕೂಡಾ ಚಾಲೆಂಜಿಂಗ್ ಟೈಂ ಆಗಿದೆ. ಜನರು ನಮಗೆ ಸಹಕರಿಸಿದರೇ ಯಶಸ್ವಿಯಾಗಿ ಪರಿಸ್ಥಿತಿ ನಿಭಾಯಿಸುತ್ತೇವೆ ಎಂದು ಸಲಹೆ ನೀಡಿದರು.

ಸೋಂಕಿತರ ಸಂಖ್ಯೆ ಹೆಚ್ಚಾದರೆ ಈಗಿರುವ ಕೋವಿಡ್ ಆಸ್ಪತ್ರೆಯ 250 ಬೆಡ್ ಗಳು ಫಿಲ್ ಆಗಲಿವೆ. ಇಎಸ್ಐ ಆಸ್ಪತ್ರೆಯಲ್ಲಿ 100 ಹಾಸಿಗೆ ವಾರ್ಡ್ ರೆಡಿ ಮಾಡಲಾಗಿದೆ. ಅಲ್ಲದೇ ಮಂಡಕಳ್ಳಿ ಬಳಿಯ ಕೆಎಸ್ಒಯು ಕಟ್ಟಡದಲ್ಲೂ ಕೊರೋನಾಗೆ ಚಿಕಿತ್ಸೆ ನೀಡಲು ಸಿದ್ದ ಗೊಳಿಸಲಾಗುತ್ತಿದೆ. 500 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಇನ್ನೊಂದು ವಾರದಲ್ಲಿ ಸಿದ್ದವಾಗಲಿದೆ. ನಮಗೆ ಆಸ್ಪತ್ರೆ ವಿಚಾರದಲ್ಲಿ ಯಾವುದೇ ತೊಂದರೆಯಾಗಲ್ಲ, ಕೇವಲ ಸಿಬ್ಬಂದಿ ಕೊರತೆಯಾಗಬಹುದು ಅಷ್ಟೇ. ಅದರ ಬಗ್ಗೆಯೂ ಗಮನಹರಿಸಲಾಗುವುದು ಎಂದು ಹೇಳಿದರು.

Leave a Comment

Scroll to Top