ಮೈಸೂರಿನಲ್ಲಿ ಕೊರೋನಾ ನರ್ತನ… ಒಂದೇ ದಿನ 7 ಪ್ರಕರಣ ಪತ್ತೆ

ಮೈಸೂರು: ಮೈಸೂರಿನಲ್ಲ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಿದ್ದು ಇಂದು ಒಂದೇ ದಿನ 7 ಪ್ರಕರಣ ಪತ್ತೆಯಾಗಿದೆ.

ಇಂದು 7 ಪ್ರಕರಣ ಪತ್ತೆಯಾದ ಹಿನ್ನಲೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28ಕ್ಕೇರಿದೆ.

ಈ 7 ಜನರಲ್ಲಿ 5 ಮಂದಿ ದೆಹಲಿಯವರು. 134, 135, 136, 137 & 138ನೇ ಪ್ರಕರಣದವರು ಕ್ರಮವಾಗಿ 38, 19, 39, 39 ಮತ್ತು 54 ವರ್ಷದ ಪುರುಷರಾಗಿದ್ದಾರೆ. ಇವರೆಲ್ಲರಿಗೂ ದಿಲ್ಲಿ ಪ್ರಯಾಣ ಬೆಳೆಸಿದ ಇತಿಹಾಸವಿದ್ದು ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು 139 ಪ್ರಕರಣದ ವ್ಯಕ್ತಿ 40 ವರ್ಷ ವಯಸ್ಸಿನ ಮೈಸೂರಿನ ಪುರುಷರಾಗಿದ್ದಾರೆ. ಇವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯೂ ಇಲ್ಲ. ಇವರಿಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತನಿಖೆ ಜಾರಿಯಲ್ಲಿದೆ. ನಗರದ ಕೆ.ಆರ್‌. ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆಗೆ ದಾಖಲಾಗಿದ್ದಾರೆ.

140 ಪ್ರಕರಣದ ವ್ಯಕ್ತಿ 34 ವರ್ಷದ ಪುರುಷರಾಗಿರುವ ಇವರು ನಂಜನಗೂಡಿನ ಜ್ಯುಬಿಲಿಯೆಂಟ್‌ ಔಷಧ ಕಾರ್ಖಾನೆಯ 109ನೇ ರೋಗಿಯ ಸಂಪರ್ಕಿತರಾಗಿದ್ದಾರೆ. ಇವರಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Comment

Scroll to Top