
ಮೈಸೂರು: ಮೈಸೂರಲ್ಲಿ ಇಂದು 8 ಜನ ಕರೋನ ಸೊಂಕಿತರು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಆಗಿದ್ದು ಸೊಂಕಿತರಿಗಿಂತ ಗುಣಮುಖ ಆದವರ ಸಂಖ್ಯೆ ಅಧಿಕವಾಗಿದೆ.
ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಈ 8 ಕೊರೋನಾ ಸೋಂಕಿತರು ಸಂಪೂರ್ಣ ಗುಣಮುಖರಾದ ಹಿನ್ನಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.
ಇನ್ನು ಜಿಲ್ಲೆಯ ಮೊದಲ SARI(ತೀವ್ರ ಉಸಿರಾಟದ ಸಮಸ್ಯೆಯಿಂದ ಬಳುತ್ತಿದ್ದ) ಪ್ರಕರಣ 72 ರ ವೃದ್ಧ ಗುಣಮುಖ ರಾಗಿದ್ದು, ಅವರೂ ಕೂಡ ಇಂದು ಡಿಸ್ಚಾರ್ಜ್ ಆಗಿದ್ದರೆ. ಆರಂಭದಲ್ಲಿ ಇವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರ ಪರಿಶ್ರಮದಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 89 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 38 ಆ್ಯಕ್ಟೀವ್ ಪ್ರಕರಣಗಳು ಇವೆ.

You must be logged in to post a comment.