ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಮಾದರಿ ಪ್ರತಿಮೆಗಳ ಅನಾವರಣ

ಮೈಸೂರು: ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರಯಾಣಿಕರ ಮಾದರಿಯ 6 ಕಂಚಿನ ಪ್ರತಿಮೆಗಳು ಅನಾವರಣಗೊಂಡಿದೆ.

ಡಿಆರ್’ಎಂ ಅರ್ಪಣ ಗರ್ಗ್ ಅವರು ಪ್ರತಿಮೆಗಳನ್ನು ಅನಾವರಣಗೊಳಿಸಿದರು. ರೈಲ್ವೆ ಪ್ರಯಾಣಿಕರ ಮಾದರಿಯ 6 ಶಿಲ್ಪಗಳ ಕಂಚಿನ ಪ್ರತಿಮೆಗಳು ನಿಜವಾಗದ ಪ್ರಯಾಣಿಕರ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಶಿಲ್ಪಿ ಅರುಣ್ ಯೋಗಿರಾಜ್ ಅವರು 4 ತಿಂಗಳ ನಿರಂತರ ಶ್ರಮದಿಂದ ಈ ಪ್ರತಿಮೆಗಳನ್ನುನಿರ್ಮಿಸಿದ್ದಾರೆ.

Leave a Comment

Scroll to Top