ಅಕ್ಟೋಬರ್ 25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ

ಮೈಸೂರು: ಮಂಗಳೂರಿನಿಂದ ಮೈಸೂರಿಗೆ ಅ. 25ರಿಂದ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.

ಅಕ್ಟೋಬರ್ 25ರಿಂದ ಮಂಗಳೂರು-ಮೈಸೂರು ನಡುವೆ ಪ್ರಾಯೋಗಿಕವಾಗಿ ವಿಮಾನ ಸಂಚಾರ ಆರಂಭವಾಗಲಿದೆ. ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ವಿಮಾನ ಸೇವೆಯನ್ನು ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ವಿಮಾನವನ್ನು ಮೈಸೂರು ಮಾರ್ಗವಾಗಿ ಹಾರಾಡ ನಡೆಸುವ ನಿರೀಕ್ಷೆ ಇದೆ. ಬೆಂಗಳೂರಿನಿಂದ ಬೆಳಗ್ಗೆ 6.50ಕ್ಕೆ ಹೊರಡುವ ವಿಮಾನ ಮೈಸೂರಿಗೆ ಹೋಗಿ 8.05ಕ್ಕೆ ಮಂಗಳೂರು ತಲುಪುವ ನಿರೀಕ್ಷೆ ಇದೆ. ಈ ವಿಮಾನ ಬೆಳಿಗ್ಗೆ 7.55ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50ಕ್ಕೆ ಮಂಗಳೂರು ತಲುಪಲಿದೆ.

Scroll to Top