ಮೈಸೂರು ದಸರಾ 2019: ದಸರಾ ಗಜಪಡೆಯ ಆಗಮನಕ್ಕೆ ದಿನಾಂಕ ನಿಗದಿ

ಮೈಸೂರು: ಮೈಸೂರಿನ ಪರಂಪರೆ ಹಾಗೂ ಇತಿಹಾಸವನ್ನು ಬಿಂಬಿಸುವ ವಿಶ್ವವಿಖ್ಯಾತ ದಸರಾ ಮಹೋತ್ಸವದ ಮುಖ್ಯ ಆಕರ್ಷಣೆ ಜಂಬೂಸವಾರಿ ಪಾಲ್ಗೊಳ್ಳಲಿರುವ ಗಜಪಡೆ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ.

ಗಜಪಡೆಯ ಮೊದಲ ತಂಡ ಆಗಸ್ಟ್ 22ಕ್ಕೆ ಕಾಡಿನಿಂದ ನಾಡಿನತ್ತ ಹೆಜ್ಜೆಯಿಡಲಿವೆ. ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಿಂದ ಮೊದಲ ತಂಡ ಮೈಸೂರು ಅರಮನೆಗೆ ಬರಲಿವೆ.

ಈ ತಂಡದಲ್ಲಿ ಒಟ್ಟು ಆರು ಆನೆಗಳು ಬರಲಿದ್ದು ಕ್ಯಾಪ್ಟನ್ ಅರ್ಜುನನ ನೇತೃತ್ವದ ಆರು ಆನೆಗಳಿಗೆ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಕೆ ಮಾಡಿ ಅರಣ್ಯ ಇಲಾಖೆ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ.

Scroll to Top