10 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿದ ಆಯೂಬ್‌ ಅಹ್ಮದ್‌ಗೆ ದಸರಾದಲ್ಲಿ ಸನ್ಮಾನದ ಗೌರವ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೊತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿ 6 ಮಂದಿ ಕೊರೋನಾ ವಾರಿಯರ್ಸ್ ಗಳನ ಸನ್ಮಾನಿಸಲಾಗುತ್ತಿದೆ. ಈ ಆರು ಮಂದಿಯಲ್ಲಿ ಮೈಸೂರಿನ ಆಯೂಬ್‌ ಅಹ್ಮದ್‌ ಅವರ ಬಗ್ಗೆ ಒಂದಷ್ಟು ಮಾಹಿತಿ.

ಕಳೆದ ಇಪ್ಪತ್ತೊಂದು ವರ್ಷಗಳಿಂದ ಸಾವಿರಾರು ಅನಾಥ ಶವಗಳನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಿರುವ ಆಯೂಬ್‌ ಅಹ್ಮದ್‌ ಅವರನ್ನು, ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ.

40 ವರ್ಷ ವಯಸ್ಸಿನ ಆಯೂಬ್ ಜಾತಿ – ಧರ್ಮದ ಹಂಗಿಲ್ಲದೇ ಕಳೆದ 21 ವರ್ಷಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿದ್ದು, ಯಾವೊಂದು ಸಹಾಯವನ್ನು ನಿರೀಕ್ಷಿದೆ, ತನ್ನ ಸ್ವಂತ ವ್ಯವಹಾರದಿಂದ ಬಂದ ಆದಾಯದಲ್ಲಿಯೇ ಸೇವೆ ಮಾಡುತ್ತಿದ್ದು, ಯಾವುದೇ ಸಮಯದಲ್ಲಿ ಕರೆ ಬಂದರು ಸೇವೆಗೆ ಸಿದ್ಧವಿರುತ್ತಾರೆ.

ಇನ್ನು ಕೊರೋನಾ ಸಂಕಷ್ಟದ ಕಾಲದಲ್ಲಿ ಕೋವಿಡ್‌ನಿಂದ ಮೃತಪಟ್ಟವರ 100ಕ್ಕೂ ಹೆಚ್ಚು ದೇಹಗಳನ್ನು ತಮ್ಮ ಸ್ವಂತ ವಾಹನದಲ್ಲಿ ಸಾಗಿಸಿ ಶವಸಂಸ್ಕಾರ ನೆರವೇರಿಸಿ ಜಿಲ್ಲಾಡಳಿತಕ್ಕೆ ನೆರವಾಗಿದ್ದಾರೆ.

ಹಿಂದೂ, ಕ್ರಿಶ್ಚಿಯನ್ನರು, ಮುಸ್ಲಿಮರು ಎನ್ನದೇ ಶವ ಸಾಗಿಸಿ ಸಂಸ್ಕಾರ ಮಾಡಿದ ಆಯೂಬ್‌ ಅವರನ್ನು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಇವರನ್ನು ಆಹ್ವಾನಿಸುತ್ತಿರುವುದು ಸರ್ವರೂ ಗೌರವಿಸುವಂತದ್ದು.

Leave a Comment

Scroll to Top