
ಮೈಸೂರು: ಕೇಂದ್ರ ಫ್ರೌಡ ಶಿಕ್ಷಣ ಮಂಡಳಿಯ(CBSE) ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಮೈಸೂರಿನ ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿನಿ ಪ್ರೀತಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
500 ಅಂಕಗಳಿಗೆ 495ಅಂಕಗಳಿಸಿ ಶೇ.97ರಷ್ಟು ಸಾಧನೆ ಮಾಡಿರುವ ವಿದ್ಯಾರ್ಥಿನಿ ಪ್ರೀತಿ. ಇನ್ನು ಕೌಟಿಲ್ಯ ವಿದ್ಯಾಲಯದ 91 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 16ವಿದ್ಯಾರ್ಥಿಗಳು ಶೇ.90 ರಷ್ಟು ಸಾಧನೆ ತೋರಿದ್ದಾರೆ.

ಉನ್ನತ ಮಟ್ಟದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸಿಹಿ ಹಂಚಿ ಕೌಟಿಲ್ಯ ವಿದ್ಯಾಲಯದ ಆಡಳಿತ ಮಂಡಳಿ ಸಂಭ್ರಮಿಸಿದೆ.