ಮೈಸೂರು: ದಸರಾ ಹಿನ್ನೆಲೆಯಲ್ಲಿ ಇಂದು ಜಂಬೂಸವಾರಿ ಉತ್ಸವದಲ್ಲಿ ಅಭಿಮನ್ಯುವಿನ ಅಂಬಾರಿ ಮೇಲೆ ವಿರಾಜಮಾನಳಾಗುವ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಯನ್ನು ಅಂಬಾವಿಲಾಸ ಅರಮನೆಯಿಂದ ಚಾಮುಂಡಿ ಬೆಟ್ಟಕ್ಕೆ ಕೊಂಡೊಯ್ಯಲಾಯಿತು.
ಅಂಬಾವಿಲಾಸ ಅರಮನೆಯಿಂದ ಚಾಮುಂಡಿ ಬೆಟ್ಟಕ್ಕೆ ತೆರಳಿದ ಪಂಚಲೋಹದಿಂದ ನಿರ್ಮಾಣಗೊಂಡಿರೋ ನಾಡದೇವಿ ಉತ್ಸವ ಮೂರ್ತಿಯನ್ನ ಚಾಮುಂಡಿ ಬೆಟ್ಟದ ಆಡಳಿತಧಿಕಾರಿ ಸಮ್ಮುಖದಲ್ಲಿ ಬೆಟ್ಟಕ್ಕೆ ರವಾನೆ ಮಾಡಲಾಯಿತು.
ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ದಿನಗಳಂದು ವಿಶೇಷ ಪೂಜೆ ನೆರವೇರಲಿದೆ. ಅದಕ್ಕೂ ಮುನ್ನ ಪ್ರತಿಮೆ ಶುಚಿಗೊಳಿಸಿ ಸಿಬ್ಬಂದಿಗಳು ಪೂಜೆಗೆ ಸಿದ್ಧತೆಗೊಳಿಸಲಿದ್ದಾರೆ. ಜಂಬೂ ಸವಾರಿ ದಿನ ಮತ್ತೆ ಅರಮನೆಗೆ ಮೂರ್ತಿಯನ್ನು ಕರೆತರಲಾಗುತ್ತದೆ. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ.
ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅ.17ರಂದು ವಿದ್ಯುಕ್ತ ಚಾಲನೆ ದೊರೆಯಲಿದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾಕ್ಕೆ ಒತ್ತು ನೀಡಲಾಗಿದೆ.