ಮೈಸೂರು: ಭಕ್ತರು ಹೆಚ್ಚಾಗಿ ಆಗಮಿಸುವ ಹಿನ್ನೆಲೆ ಆಗಸ್ಟ್ 19ರ ಅಮಾವಾಸ್ಯೆ ದಿನದಂದು ಮೈಸೂರು ಚಾಮುಂಡಿ ಬೆಟ್ಟ ದೇಗುಲಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಆಗಸ್ಟ್ 19 ಅಮಾವಾಸ್ಯೆ ದಿನವಾಗಿದ್ದು, ಅಂದು ದೇವಾಲಯಕ್ಕೆ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇರುತ್ತದೆ. ಜನಜಂಗುಳಿಯಿಂದ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಿದ್ದು, ಮುಂಜಾಗ್ರತೆ ಕ್ರಮವಾಗಿ ಅಂದು ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಇನ್ನು, ಉತ್ತನಹಳ್ಳಿ ಜ್ವಾಲಾ ತ್ರಿಪುರ ಸುಂದರಿ ದೇವಾಲಯಕ್ಕೂ ಆಗಸ್ಟ್ 19 (ಅಮಾವಾಸ್ಯೆ) ಮತ್ತು 21 ರಂದು (ಸ್ವರ್ಣಗೌರಿ ವ್ರತ) ಪ್ರವೇಶ ನಿರ್ಬಂಧಿಸಲಾಗಿದೆ.