
ಮೈಸೂರು: ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ದುಡ್ಡಿಗೆ ಜನರು ಬೆಂಕಿ ಹಚ್ಚಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಜರ್‌ಬಾದ್‌ನ ಮೆಡಿಕಲ್ ಸ್ಟೋರ್‌ವೊಂದರ ಮುಂಭಾಗ ಬಿದ್ದಿದ್ದ 100ರ ಹೊಸ ನೋಟು ನೋಡಿ ಆತಂಕಗೊಂಡ ಜನ, ತಕ್ಷಣ ಅದಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ್ದಾರೆ. ಮುಂಭಾಗ 100 ರೂ. ಮುಖಬೆಲೆಯ ನೋಟು ಬಿದ್ದಿತ್ತು. ನೋಟಿನಲ್ಲಿ ಕೊರೋನಾ ವೈರಸ್ ಅಂಟಿರಬಹುದೆಂಬ ಶಂಕೆಯಿಂದ ನೋಟಿಗೆ ವ್ಯಕ್ತಿಯೋರ್ವರು ಮೊದಲು ಸ್ಯಾನಿಟೈಸರ್ ಹಾಕಿ ನಂತರ ಬೆಂಕಿ ಇಟ್ಟಿದ್ದಾರೆ. ನೋಟಿಗೆ ಬೆಂಕಿ ಇಟ್ಟ ವಿಡಿಯೋ ವೈರಲ್ ಆಗಿದ್ದು, ಮೈಸೂರಿನ ಜನತೆಯಲ್ಲಿ ಆತಂಕ ಹೆಚ್ಚಿದೆ.
ಇನ್ನು ಗುರುವಾರ ಹೆಬ್ಬಾಳದಲ್ಲಿಯೂ ಕೂಡ ಇಂತಹ ಘಟನೆ ನ ಡೆದಿತ್ತು. 50ರೂ.ನೋಟುಗಳನ್ನು ಅನಾಮಿಕರು ಬಿಸಾಡಿ ಹೋಗಿದ್ದರು. ಅದನ್ನು ಪಾಲಿಕೆ ಅಧಿಕಾರಿಗಳು ಎತ್ತಿಕೊಂಡು ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ.
ಜನತೆಯಲ್ಲಿ ಭೀತಿ ಹುಟ್ಟಿಸಲು ಯಾರೋ ಬೇಕೆಂತಲೇ ಈ ಕೆಲಸ ಮಾಡುತ್ತಿದ್ದಾರಾ..? ಅಥವಾ ಕೊರೋನಾ ವೈರಸ್ ಸೋಂಕಿರುವವರೇ ಸೋಂಕು ಹರಡಲು ಈ ರೀತಿ ಮಾಡುತ್ತಿದ್ದಾರಾ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.