ಮೈಸೂರು ವಿಮಾನ‌ನಿಲ್ದಾಣದಲ್ಲೂ ಕೊರೋನಾ ವೈರಸ್ ಹೈ ಅಲರ್ಟ್

ಮೈಸೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್.

ಮೈಸೂರಿನಿಂದ ಕೇರಳ, ಗೋವಾಕ್ಕೆ ವಿಮಾನಗಳ ಸಂಚಾರ ಹಿನ್ನೆಲೆ ಕೊರೋನಾ ವೈರಸ್ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.

ಏರ್ ಪೋರ್ಟ್ ಸಿಬ್ಬಂದಿ ಹಾಗೂ ಭದ್ರತಾ ಪೊಲೀಸರಿಗೆ ಮಾಸ್ಕ್ ಗಳ‌ ವಿತರಣೆ ಮಾಡಲಾಗಿದ್ದು, ಮಾಸ್ಕ್ ಧರಿಸಿ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವೈಸರ್ ಬಗ್ಗೆ ಏರ್ ಪೋರ್ಟ್ ನಲ್ಲಿ ಜಾಗೃತಿ ಫಲಕಗಳ ಅಳವಡಿಕೆ.

Scroll to Top