ಮೈಸೂರು: ಕೊರೋನಾ ಸೋಂಕು ಭೀತಿ ಹಿನ್ನಲೆ ಮೈಸೂರು ಜಿಲ್ಲೆಯಾದ್ಯಂತ ಯುಗಾದಿ ಪುಣ್ಯಸ್ನಾನ ರದ್ದುಗೊಳಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
25ರಂದು ಯುಗಾದಿ ದಿನ ನಡೆಯಬೇಕಿದ್ದ ಪುಣ್ಯಸ್ನಾನ ನಡೆಸುವಂತಿಲ್ಲ. ಮೈಸೂರಿನ ನಂಜನಗೂಡು ಕಪಿಲಾನದಿ, ಟಿ.ನರಸೀಪುರದ ಕಾವೇರಿ ನದಿ ಸಮೀಪ ಸೇರಿದಂತೆ ಎಲ್ಲಿಯೂ ಸಾಮೂಹಿಕ ಪುಣ್ಯ ಸ್ನಾನ ಮಾಡುವಂತಿಲ್ಲ.
ಯುಗಾದಿ ದಿನದಂದು ದೇವಾಲಯಗಳಿಗೆ ಜನರು ತೆರಳಬಾರದು. ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಇದ್ದು ಹಬ್ಬ ಆಚರಿಸಿ. ಜನಸಂದಣಿ ಸೃಷ್ಠಿಯಾಗದಂತೆ ನೋಡಿಕೊಳ್ಳೋದು ಸಾರ್ವಜನಿಕರ ಜವಬ್ದಾರಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.