ಸರಸ್ವತಿಪುರಂನ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗೆ ಕೊರೋನಾ: ಕಳೆದ 15 ದಿನಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಿದವರಿಗೆ ಕ್ವಾರೆಂಟೈನ್’ಗೆ ಮನವಿ

ಮೈಸುರು: ನಗರದ ಸರಸ್ವತಿಪುರಂನ 5ನೇ ಮುಖ್ಯ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಬ್ರಾಂಚ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರಿಗೆ ಇಂದು(19.06.2020) ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.

ಕಳೆದ 15 ದಿನಗಳಲ್ಲಿ ಸರಸ್ವತಿಪುರಂ 5ನೇ ಮುಖ್ಯ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿರುವ ಗ್ರಾಹಕರು ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಸಾರ್ವಜನಿಕರನ್ನು ಸೋಂಕಿತ ವ್ಯಕ್ತಿಯ ಪ್ರಾಥಮಿಕ/ದ್ವಿತೀಯ ಸಂಪರ್ಕಿತರೆಂದು ಪರಿಗಣಸಿ ಕ್ವಾರಂಟೈನ್ ಮಾಡಬೇಕಾಗಿರುತ್ತದೆ. ಆದ್ದರಿಂದ ದಯಮಾಡಿ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ ಕಂಟ್ರೋಲ್ ರೂಮ್ ಸಂಖ್ಯೆ: 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

Scroll to Top