ಮೈಸೂರು: ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 7.95 ಲಕ್ಷ ವೈಲ್ ಗಳು ಪೊರೈಕೆಯಾಗುತ್ತಿದ್ದು, ಈ ಪೈಕಿ 6 ಲಕ್ಷ 47 ಸಾವಿರದ 500 ಡೋಸ್ ಲಸಿಕೆ ಈಗಾಗಲೆ ಬೆಂಗಳೂರಿಗೆ ಆಗಮಿಸಿದೆ.
ಉಳಿದ ಲಸಿಕೆ ನಾಳೆ ಬೆಳಗಾವಿಗೆ ರವಾನೆಯಾಗಲಿದೆ. ಜನವರಿ 16 ರಿಂದ ಕೊವೀಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಲಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತದೆ.
ಇನ್ನು ಮೈಸೂರು ಜಿಲ್ಲೆಯಲ್ಲಿ ಒಟ್ಟು 234 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
- ಮೈಸೂರು ಜಿಲ್ಲೆಯಲ್ಲಿ ಒಟ್ಟು 234 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತಿದೆ .
- ಈ ಪೈಕಿ ಸರ್ಕಾರಿ ಲಸಿಕಾ ಕೇಂದ್ರಗಳು – 162.
- ಖಾಸಗಿ ಲಸಿಕಾ ಕೇಂದ್ರಗಳು – 72 (26 ಸಂಸ್ಥೆಗಳು) ಇವೆ.
- ಮೈಸೂರು ಜಿಲ್ಲೆಯಲ್ಲಿ ಒಟ್ಟು 70,000 ಸಿರಿಂಜ್ ಗಳು ಶೇಖರಣೆ ಮಾಡಲಾಗಿದೆ.
- ಮೈಸೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಒಟ್ಟು 33,009.
- ಈ ಪೈಕಿ, ಸರ್ಕಾರಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ – 14,976.
- ಖಾಸಗಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ – 18,033.
- ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಕೊರೋನಾ ಲಸಿಕೆ ವಿತರಣೆ ಮಾಡಲಾಗುತ್ತಿದೆ.