ಚಾಮುಂಡಿ ಬೆಟ್ಟದಲ್ಲಿರುವ ಪ್ರಸಿದ್ದ ನಂದಿ ವಿಗ್ರಹದಲ್ಲಿ ಬಿರುಕು: ಭಕ್ತರಲ್ಲಿ ಆತಂಕ

ಮೈಸೂರು: ಸುಮಾರು 400 ವರ್ಷಗಳ ಇತಿಹಾವಿರುವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಪ್ರಸಿದ್ದ ಏಕಶಿಲಾ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭಕ್ತರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ.

ಬೃಹತ್ ಏಕಶಿಲಾ ವಿಗ್ರಹ ನಂದಿಯ ಬಲ ಪಾರ್ಶ್ವದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಬಿರುಕು ಇತಿಹಾಸ ತಜ್ಞ ಪ್ರೊ. ರಂಗರಾಜು ಗುರುತಿಸಿದ್ದಾರೆ. ಪುರಾತತ್ವ ಸಮಿತಿ ಹಾಗೂ ಪರಂಪರೆ ಸಮಿತಿ ಸದಸ್ಯರ ತಂಡ ಈ ಬಿರುಕಿನ ಸಾದಕ ಬಾದಕಗಳ ಬಗ್ಗೆ ಜಿಲ್ಲಾದಿಕಾರಿಗಳಿಗೆ ವರದಿ ನೀಡಿದ್ದಾರೆ. ಅಲ್ಲದೇ ವಿಗ್ರಹ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯನ್ನೂ ನೀಡಿದ್ದಾರೆ.

ಕಪ್ಪಾಗಿದ್ದ ನಂದಿ ವಿಗ್ರಹಕ್ಕೆ ಕಳೆದ ವರ್ಷ ಪಾಲಿಶ್​ ಮಾಡಿ ಹೊಸ ರೂಪ ಕೊಡಲಾಗಿತ್ತು. ಈ ಮೂಲಕ ಕಪ್ಪಾಗಿದ್ದ ನಂದಿ ವಿಗ್ರಹ ಬಿಳಿ ಬಣ್ಣ ಪಡೆದು ಪರಿವರ್ತನೆಯಾಗಿದೆ. ವಿಗ್ರಹಕ್ಕೆ ಪಾಲಿಶ್​ ಮಾಡಿಸಿದ್ದರಿಂದ ಕೆಮಿಕಲ್​ ಎಫೆಕ್ಟ್​​ನಿಂದ ವಿಗ್ರಹ ಬಿರುಕು ಬಿಟ್ಟಿದೆ ಎಂದು ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂದಿ ವಿಗ್ರಹ ಸುಮಾರು 400 ವರ್ಷಗಳ ಹಳೆಯ ವಿಗ್ರಹವಾಗಿದ್ದು 1659-73 ರಲ್ಲಿ ನಿರ್ಮಾಣ ಗೊಂಡಿತ್ತು. ದೊಡ್ಡದೇವರಾಜ ಒಡೆಯರ್ ಕಾಲದ ಏಕಶಿಲಾ ವಿಗ್ರಹವಾಗಿದ್ದು, ಚಾಮುಂಡಿಬೆಟ್ಟದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 600 ವರ್ಷ ಇತಿಹಾಸವಿರುವ ಈ ನಂದಿ ವಿಗ್ರಹ 15 ಅಡಿ ಎತ್ತರ, 24 ಅಡಿ ಉದ್ದವಿದೆ. ಈ ನಂದಿ ವಿಗ್ರಹ ವರ್ಷಕ್ಕೆ ಎರಡು ಬಾರಿ ಮಹಾ ಮಜ್ಜನ ನಡೆಯೋ ಪುಣ್ಯ ಸ್ಥಳವಾಗಿದೆ.

Leave a Comment

Scroll to Top