ಜಂಬೂಸವಾರಿಗೂ ಮೊದಲೇ ಕಾಡಿಗೆ ವಾಪಸ್ ತೆರಳಲಿದ್ದಾನೆ ಈಶ್ವರ

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಆನೆ ಈಶ್ವರನನ್ನು ಕಾಡಿನತ್ತ ವಾಪಸ್ ಕಳುಹಿಸುವ ಚಿಂತನೆ ನಡೆಸಲಾಗಿದೆ.

ದುಬಾರೆ ಆನೆ ಶಿಬಿರದಿಂದ ಗಜಪಡೆಯ ಮೊದಲ ತಂಡದಲ್ಲಿ ದಸರೆಗೆಂದು ಈಶ್ವರ ಆಗಮಿಸಿದ್ದ. ಆತ ನಗರದ ವಾತವರಣಕ್ಕೆ ಹೊಂದಿಕೊಳ್ಳದ ಕಾರಣ ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ದಸರೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಆನೆಯ ಬಗ್ಗೆ ಆತಂಕ ಹೊರಹಾಕಿದ್ದರು. ಅಲ್ಲದೇ ಆನೆಯ ವರ್ತನೆ ಸಾರ್ವಜನಿಕರಿಂದಲೂ ದೂರುಗಳು ಬಂದ ಹಿನ್ನೆಲೆ ವಾಪಸ್ ಕಳಿಸಲು ನಿರ್ಧಾರ ಮಾಡಿದ್ದಾರೆ.

ಈಶ್ವರನ ಬದಲಾಗಿ ದಸರೆಗೆ ಬೇರೆ ಆನೆಯನ್ನು ಕರೆತರಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.

Leave a Comment

Scroll to Top