
ಮೈಸೂರು: ಕೊರೋನಾ ಹಿನ್ನಲೆ ಈ ಬಾರಿ ಮೈಸೂರು ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಲಾಗಿದೆ. ಈ ಬೆನ್ನಲೆ ಅರಮನೆಯಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ರದ್ದು ಮಾಡಲಾಗಿದೆ.
ಈಗಾಗಲೆ ಹಲವು ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಡಲಾಗಿದೆ. ಜಂಬೂ ಸವಾರಿಯು ಅರಮನೆ ಆವರಣಕ್ಕೆ ಸೀಮಿತವಾಗಿದೆ. ಅಂತೆಯೇ ಪ್ರತಿವರ್ಷ ದಸರಾ ಜಂಬೂ ಸವಾರಿ ಮೆರವಣಿಗೆಯ ದಿನದಂದು ಬೆಳಿಗ್ಗೆ ಅರಮನೆಯ ಒಳ ಆವರಣದ ಸವಾರಿ ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗವನ್ನೂರದ್ದು ಮಾಡಲಾಗಿದೆ.
ರಾಜಮನೆತನಕ್ಕೆ ನಿಷ್ಠೆಯಾಗಿ ಜಟ್ಟಿ ಜನಾಂಗದವರಿಂದ ಪ್ರತಿವರ್ಷ ದಸರಾ ಜಂಬೂ ಸವಾರಿ ದಿನ ವಜ್ರಮುಷ್ಠಿ ಕಾಳಗ ನಡೆಯುತ್ತಿತ್ತು. ಕೊರೋನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ರಾಜಮನೆತನ ಈ ಬಾರಿ ವಜ್ರಮುಷ್ಠಿ ಕಾಳಗ ಬೇಡ ಎಂದು ಹೇಳಿದೆ.