ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆ: ಅ.23 ರಿಂದ 25 ರವರೆಗೆ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಬಂದ್

ಮೈಸೂರು: ಕೋವಿಡ್-19 ಮುಂಜಾಗ್ರತ ಕ್ರಮವಾಗಿ ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರದ ಸಗಟು & ಚಿಲ್ಲರೆ ಮಾರಾಟ ಮಳಿಗೆಗಳನ್ನು ಅ.23 ರಿಂದ ಅ.25 ರವರೆಗೆ ಮುಚ್ಚಲು ಆದೇಶಿಸಿದೆ.

ಹೂವಿನ ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸದರಿ ಮೂರು ದಿನಗಳು ರೈಲ್ವೆ ನಿಲ್ದಾಣದ ಬಳಿ ಇರುವ ಜೀವರಾಯನಕಟ್ಟೆ ಮೈದಾನ(ಜೆ.ಕೆ.ಮೈದಾನ)ದಲ್ಲಿ ಹೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ಕ್ರಮವನ್ನು ಕೈಗೊಂಡು ನಗರಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಆದೇಶವನ್ನು ಹೊರಡಿಸಿದ್ದಾರೆ.

Leave a Comment

Scroll to Top