ಮೈಸೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ ಡಬ್ಬಲ್ ಡೆಕ್ಕರ್ ಬಸ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೈಸೂರಿನಲ್ಲಿ ರಸ್ತೆಗಿಳಿಯಲು ಡಬ್ಬಲ್ ಡೆಕ್ಕರ್ ಬಸ್ ಗಳು ತಯಾರಾಗಿದ್ದು ಕೆಲ ದಿನಗಳಲ್ಲೇ ದಿನದಲ್ಲಿ ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ಮೈಸೂರಿನ ಸಂಪೂರ್ಣ ಪ್ರವಾಸಿತಾಣಗಳ ಸವಿಯನ್ನು ಸವಿಯಬಹುದಾಗಿದೆ.

ಮೈಸೂರಿಗರ ಬಹುದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದ್ದು, ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಸಲಾಗುತ್ತಿದೆ. ಮೈಸೂರಿನಲ್ಲಿ ಕೇವಲ ದಸರಾ ಸಂದರ್ಭಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಬಸ್ ಸಂಚರಿಸುತ್ತಿತ್ತು ಇದೀಗ ವರ್ಷವಿಡೀ ಡಬಲ್ ಡೆಕ್ಕರ್ ಬಸ್ ನ ಸೌಲಭ್ಯ ಸಿಗಲಿದೆ. ಸದ್ಯಕ್ಕೆ ಒಂದು ಬಸ್‌ ಮೈಸೂರಿಗೆ ಆಗಮಿಸಿದ್ದು ಏಪ್ರಿಲ್ 1ರಿಂದ ರಸ್ತೆಯಲ್ಲಿ ಸಂಚಾರ ಆರಂಭಗೊಳ್ಳಲಿದೆ. ಉಳಿದ 5 ಬಸ್‌ಗಳು ಮಾರ್ಚ್‌ ಅಂತ್ಯಕ್ಕೆ ಮೈಸೂರಿಗೆ ಆಗಮಿಸಲಿವೆ.

ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪರಿಚುಸಲು ಯೋಜನೆ ರೂಪಿಸಿತ್ತು. 2019ರ ಜುಲೈನಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 5 ಕೋಟಿ ರೂ ಅನುದಾನ ನೀಡಿದ್ದರು.

ಬೆಂಗಳೂರು ಮೂಲದ ಕೆಎಂಎಸ್‌ ಕೋಚ್‌ ಬಿಲ್ಡರ್ಸ್‌ ಸಂಸ್ಥೆ 6 ಡಬಲ್‌ ಡೆಕ್ಕರ್‌ ಬಸ್‌ಗಳ ಬಾಡಿ ತಯಾರು ಮಾಡುತ್ತಿದ್ದು, ಪ್ರಾಯೋಗಿಕವಾಗಿ ಒಂದು ಬಸ್‌ ಸಿದ್ಧವಾಗಿದೆ. ಪ್ರತಿ ಬಸ್‌ಗಳು 40 ಸೀಟುಗಳ ಸಾಮರ್ಥ್ಯ ಹೊಂದಿವೆ. ಕೆಳಗೆ 20 ಹಾಗೂ ಮೇಲೆ 20 ಸೀಟುಗಳನ್ನು ಅಳವಡಿಸಲಾಗಿದೆ. ಆರು ಬಸ್‌ಗಳ ಪೈಕಿ ನಾಲ್ಕು ಮೈಸೂರಿನಲ್ಲಿ ಹಾಗೂ ಉಳಿದ 2 ಬಸ್‌ಗಳು ಹಂಪಿಯಲ್ಲಿ ಸಂಚರಿಸಲಿವೆ.

ಈ ಬಸ್‌ ಮೂಲಕ ಪ್ರವಾಸೋದ್ಯಮಗಳ ಸ್ಥಳದ ಬಗ್ಗೆ ಬಸ್ ನಲ್ಲೇ ಮಾಹಿತಿ ನೀಡಲಾಗುತ್ತಿದ್ದು ಎಲ್ ಇಡಿ ಟಿವಿ ಮೂಲಕ ಪ್ರವಾಸಿ ತಾಣಗಳ ವಿಡಿಯೋ ಹಾಗೂ ಆಡಿಯೋದಲ್ಲಿ ಮಾಹಿತಿ ಸಿಗಲಿದೆ. ಮೈಸೂರು ನಗರದಾದ್ಯಂತ 35ಕಿ.ಲೋ ವ್ಯಾಪ್ತಿಯಲ್ಲಿ ಈ ಬಸ್ ಗಳು ಸಂಚಾರ ನಡೆಸಲಿವೆ.

Leave a Comment

Scroll to Top