ಮೈಸೂರಿಗರಿಗೆ ಖುಷಿಯ ವಿಚಾರ. ರಸ್ತೆಗಿಳಿಯಲು ಸಿದ್ಧವಾಗಿದೆ ಡಬಲ್ ಡೆಕ್ಕರ್ ಬಸ್!

ಮೈಸೂರು: ಮೈಸೂರು ಪ್ರವಾಸಿಗರಿಗೆ ಖುಷಿಯ ವಿಚಾರ. ಮೈಸೂರು ಪ್ರವಾಸಿತಾಣಗಳನ್ನು ಇನ್ಮುಂದೆ ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ವೀಕ್ಷಣೆ ಮಾಡಬಹುದು.

ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪ್ರವಾಸಿ ತಾಣಗಳನ್ನು ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕುಳಿತು ವೀಕ್ಷಿಸುವ ಮೈಸೂರಿಗರ ಬಹುದಿನಗಳ ಕನಸು ಮಾರ್ಚ್‌ ಅಂತ್ಯದ ವೇಳೆಗೆ ಈಡೇರಲಿದೆ.

ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪರಿಚುಸಲು ಯೋಜನೆ ರೂಪಿಸಿತ್ತು. 2019ರ ಜುಲೈನಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 5 ಕೋಟಿ ರೂ ಅನುದಾನ ನೀಡಿದ್ದರು.

ಇದೀಗ ಒಂದು ಬಸ್‌ ಸಿದ್ಧವಾಗಿದ್ದು, ಉಳಿದ ಐದು ಬಸ್‌ಗಳು ಮಾರ್ಚ್‌ ಅಂತ್ಯಕ್ಕೆ ಸಿದ್ಧವಾಗಲಿವೆ. ಬೆಂಗಳೂರು ಮೂಲದ ಕೆಎಂಎಸ್‌ ಕೋಚ್‌ ಬಿಲ್ಡರ್ಸ್‌ ಸಂಸ್ಥೆ 6 ಡಬಲ್‌ ಡೆಕ್ಕರ್‌ ಬಸ್‌ಗಳ ಬಾಡಿ ತಯಾರು ಮಾಡುತ್ತಿದ್ದು, ಪ್ರಾಯೋಗಿಕವಾಗಿ ಒಂದು ಬಸ್‌ ಸಿದ್ಧವಾಗಿದೆ. ಇದರಲ್ಲಿ ನಾಲ್ಕು ಮೈಸೂರಿನಲ್ಲಿ ಹಾಗೂ ಉಳಿದ 2 ಬಸ್‌ಗಳು ಹಂಪಿಯಲ್ಲಿ ಸಂಚರಿಸಲಿವೆ.

ಪ್ರತಿ ಬಸ್‌ಗಳು 40 ಸೀಟುಗಳ ಸಾಮರ್ಥ್ಯ ಹೊಂದಿವೆ. ಕೆಳಗೆ 20 ಹಾಗೂ ಮೇಲೆ 20 ಸೀಟುಗಳನ್ನು ಅಳವಡಿಸಲಾಗಿದೆ. ಆರು ಬಸ್‌ಗಳ ಪೈಕಿ ನಾಲ್ಕು ಮೈಸೂರಿಗೆ ಹಾಗೂ ಎರಡು ಬಸ್‌ಗಳು ಹಂಪಿಯಲ್ಲಿ ಸಂಚರಿಸಲಿವೆ.

View this post on Instagram

ಮೈಸೂರಿಗರಿಗೆ ಖುಷಿಯ ವಿಚಾರ. ರಸ್ತೆಗಿಳಿಯಲು ಸಿದ್ಧವಾಗಿದೆ ಡಬಲ್ ಡೆಕ್ಕರ್ ಬಸ್! ಮಾರ್ಚ್‌ ಅಂತ್ಯಕ್ಕೆ ಮೈಸೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳು ಸಂಚಾರ ಆರಂಭಿಸಲಿವೆ. ಮೈಸೂರು ಮತ್ತು ಹಂಪಿಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಇದೀಗ ಮೈಸೂರಿನಲ್ಲಿ ಮೊದಲ ಬಾರಿಗೆ ಡಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಗೊಳ್ಳಲಿದ್ದು ಒಂದು ಬಸ್ ತಯಾರಾಗಿದೆ. . . . . #mysuru #mysore #travelkarnataka #karnatakatourism #mysuruonline

A post shared by Mysuru Online (@mysuruonline) on

Scroll to Top