ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮಕ್ಕೆ ಬೆಳ್ಳಂಬೆಳಿಗ್ಗೆಯೇ ಕಾಡಾನೆ ನುಗ್ಗಿ ದಾಂಧಲೆ ನಡೆಸಿದೆ.
ಬೀಚನಹಳ್ಳಿ ಗ್ರಾಮದೊಳಗೆ ಮುಜಾನೆಯೇ ಕಾಡಾನೆ ದಾಳಿ ನಡೆಸಿದ್ದು ಕಾಡಾನೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ದಾಳಿಗೆ ಎರಡು ಬೈಕ್, ಒಂದು ಸೈಕಲ್ ಜಖಂ ಆಗಿದ್ದು ಮನೆ ಮುಂಭಾಗ ಕುಳಿತಿದ್ದ ಲಕ್ಷ್ಮಮ್ಮ ಎಂಬ ಮಹಿಳೆ ಮೇಲೂ ಒಂಟಿಸಲಗ ದಾಳಿ ಮಾಡಿದೆ. ಇದರಿಂದ ಲಕ್ಷ್ಮಮ್ಮ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಡಿಯೋ ನೋಡಿ:
ಒಂಟಿ ಸಲಗ ದಾಳಿ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು ಮನೆಯಿಂದ ಯಾರು ಹೊರಬಾರದಂತೆ ಕೂಗುತ್ತಿದ್ದರೇ ಇತ್ತ ಆನೆ ನೋಡಲು ಗ್ರಾಮದ ಮಕ್ಕಳು ಮುಗ್ಗಿಬಿದ್ದ ದೃಶ್ಯ ಕಂಡು ಬಂತು. ಬೀಚನಹಳ್ಳಿ- ಸಾಗರೆ ರಸ್ತೆ, ಗ್ರಾಮ, ಕಬಿನಿ ಹಿನ್ನೀರು ಬಳಿ ಆನೆ ಸಂಚರಿಸಿದ್ದು ಮಾಕೋಡ್ಲು, ಸಾಗರೆ ಗ್ರಾಮಗಳಲ್ಲೂ ಒಂಟಿಸಲಗ ಓಡಾಡಿದೆ. ಸದ್ಯ ಸರಗೂರು ಸಮೀಪದ ಜಮೀನಿನಲ್ಲಿ ಆನೆ ಬೀಡುಬಿಟ್ಟಿದ್ದು, ಸ್ಥಳಕ್ಕೆ ಬೀಚನಹಳ್ಳಿ ಪೊಲೀಸರ ಆಗಮಿಸಿದ್ದಾರೆ.
ಇನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಳು ಆನೆ ಹಿಡಿಯಲು ಹರಸಾಹಸಪಡುತ್ತಿದ್ದಾರೆ.