ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆಯ ಧ್ವನಿ, ಬೆಳಕು ಕಾರ್ಯಕ್ರಮ ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಇಂಗ್ಲಿಷ್‌ನಲ್ಲೂ ಆರಂಭಿಸಲಾಗಿದೆ.

ಸೋಮವಾರದಿಂದ ಬುಧವಾರದ ವರೆಗೆ ರಾತ್ರಿ 7 ರಿಂದ 8 ರವರೆಗೆ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಗುರುವಾರ, ಶುಕ್ರವಾರ, ಶನಿವಾರ ರಾತ್ರಿ 7 ರಿಂದ 8 ರವರೆಗೆ ಇಂಗ್ಲಿಷ್‌ನಲ್ಲಿ, ಶನಿವಾರ ರಾತ್ರಿ 8.15 ರಿಂದ 9.15 ರವರೆಗೆ ಕನ್ನಡದಲ್ಲಿ ಕಾರ್ಯಕ್ರಮ ನಡೆಲಿದೆ.

ಕನ್ನಡ ಅವತರಣಿಕೆಯ ಕಾರ್ಯಕ್ರಮಕ್ಕೆ ವಯಸ್ಕರಿಗೆ ₹ 70, ಮಕ್ಕಳಿಗೆ ₹ 30 (10 ವರ್ಷ ಮೇಲಿನ, 18 ವರ್ಷದೊಳಗಿನ) ಹಾಗೂ ಇಂಗ್ಲಿಷ್‌ ಅವತರಣಿಕೆಯ ಕಾರ್ಯಕ್ರಮಕ್ಕೆ ವಯಸ್ಕರಿಗೆ ₹ 90, ಮಕ್ಕಳಿಗೆ ₹ 40 ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಪ್ರಕಟಣೆ ತಿಳಿಸಿದೆ.

Leave a Comment

Scroll to Top