ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಗಜಪಡೆಯ ಮೊದಲ ತಂಡ ಅರಮನೆಯ ಜಯಮಾರ್ಥಾಂಡ ದ್ವಾರದಲ್ಲಿ ಸೋಮವಾರ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಇದರೊಂದಿಗೆ ಮೈಸೂರು ನಗರದಲ್ಲಿ ದಸರಾ ಸಡಗರ, ಸಂಭ್ರಮ ಇಂದಿನಿಂದಲೇ ಗರಿಗೆದರಿದ್ದು, ದಸರಾ‌ ಮಹೋತ್ಸವಕ್ಕೆ ದಿನಗಣನೆಯೂ ಆರಂಭವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಅನೆಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಆರ್ಜುನ ನೇತೃತ್ವದ ಆರು ಆನೆಗಳು ಇಂದು ಅರಮನೆಗೆ ಆಗಮಿಸಿವೆ.

ಇದಕ್ಕು ಮೊದಲು ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ‌ ಆನೆಗಳನ್ನು ಬೀಳ್ಕೊಡಲಾಯಿತು. ಅರಣ್ಯ ಭವನದಲ್ಲಿ ಪೂಜೆ ಮುಗಿದ ಬಳಿಕ ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಗನ್ ಹೌಸ್ ವೃತ್ತ ಮೂಲಕ ಗಜಪಡೆ ಸಾಗಿ ಜಯಮಾರ್ಥಾಂಡ ದ್ವಾರದ ಮೂಲಕ ಅರಮನೆ ಅವರಣ ಪ್ರವೇಶ ಮಾಡಿತು.

ಗಜಪಡೆಯ ನೋಡಲು ಮುಗಿ ಬಿದ್ದ ಜನ:

ಇನ್ನು ರಸ್ತೆ ಮಾರ್ಗವಾಗಿ ಸುಮಾರು 12 ಗಂಟೆ ವೇಳೆಗೆ ಅರಮನೆಯತ್ತ ಹೊರಟ ಗಜಪಡೆಯಯನ್ನು ನೋಡಲು ದಾರಿಯುದ್ದಕ್ಕೂ ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ಸಾಲುಗಟ್ಟಿನಿಂತು ನೊಡಿ ಖುಷಿಪಟ್ಟರು.

Leave a Comment

Scroll to Top