ಇತಿಹಾಸದ ಪುಟ ಸೇರಿತು ಮಹಾತ್ಮ ಗಾಂಧೀಜಿ ಉದ್ಘಾಟಿಸಿದ್ದ ಮೈಸೂರಿನ ಕೆ.ಆರ್ ಮಿಲ್ ಕಾರ್ಖಾನೆ

ಮೈಸೂರು: ಇತಿಹಾಸದ ಪುಟಗಳಲ್ಲಿ ತನ್ನದೇ ಆತ ವಿಶೇಷ ಚಾಪು ಮೂಡಿಸಿದ್ದ ಮೈಸೂರಿನ ಹೆಮ್ಮೆಯ ಕೆ.ಆರ್.ಮಿಲ್ ಕಾರ್ಖಾನೆ (ಕೃಷ್ಣರಾಜೇಂದ್ರ ಬಟ್ಟೆ ಗಿರಣಿ) ಇನ್ನು ಕೇವಲ ನೆನಪು ಮಾತ್ರ.

ಹೌದು. ಅಭಿವೃದ್ದಿ ಹೆಸರಲ್ಲಿ ಮೈಸೂರಿನ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಬೇಕಿದ್ದ ಕೆ.ಆರ್.ಮಿಲ್ ಕಾರ್ಖಾನೆಯನ್ನು ನೆಲಸಮ ಮಾಡಲಾಗಿದೆ.

ಬೆಂಗಳೂರು ಮತ್ತು ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ನ್ನು 10 ಲೇನ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಭೂ ಸ್ವಾದೀನ ಮಾಡಕೊಂಡು ರಸ್ತೆ ಅಗಲೀಕರಣ ಮಾಡುತ್ತಿದೆ. ಹೀಗಾಗಿ ಈ ಮಾರ್ಗ ಮಧ್ಯೆ ಸಿಗುವ ಮೈಸೂರಿನ ಹೆಮ್ಮೆಯ ಕೆ.ಆರ್.ಮಿಲ್ ಕಾರ್ಖಾನೆಯನ್ನು ನೆಲಸಮ ಮಾಡಲಾಗಿದೆ.

ಗಾಂಧೀಜಿಯಿಂದ ಉದ್ಘಾಟನೆ:

ಮಹತ್ಮ ಗಾಂಧೀಜಿ ಅವರು ಮೈಸೂರಿಗೆ ಎರಡು ಬಾರಿ ಭೇಟಿ ನೀಡಿದ್ದರು. ಮೊದಲ ಬಾರಿಗೆ ಭೇಟಿಕೊಟ್ಟಿದ್ದು 1927ರಲ್ಲಿ. ಈ ವೇಳೆ ಆಗ ತಾನೇ ಮೈಸೂರು ಮಹಾರಾಜರಿಂದ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ ಉದ್ಘಾಟನೆಯನ್ನು ನೆರವೇರಿಸಿದ್ದರು. ಎರಡನೇ ಬಾರಿಗೆ ಬಂದಾಗ ಇದೇ ಗಿರಣಿಯ ಕಾರ್ಮಿಕರು ರಾತ್ರಿ- ಹಗಲು ಹೆಚ್ಚುವರಿ ಕೆಲಸ ಮಾಡಿ, ಅದರಿಂದ ಬಂದ ಹಣವನ್ನು ಗಾಂಧೀಜಿಯವರಿಗೆ ನೀಡಿದ್ದರು.

ಆದರೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯ ನಿರ್ವ ಹಿಸುತ್ತಿದ್ದ, ಮೈಸೂರು ಜಿಲ್ಲೆಯ ಸಾವಿರಾರು ಕಾರ್ಮಿಕ ಕುಟುಂಬಕ್ಕೆ ಜೀವನಾಧಾರವಾಗಿದ್ದ ಕೆ.ಆರ್.ಮಿಲ್ ಕಾರ್ಖಾನೆ ಅವಸಾನದಂಚಿಗೆ ತಲುಪಿ 4/6/1984 ರಂದು ಮುಚ್ಚಿ ಹೋಯಿತು. ಕಾರ್ಕಾನೆಯನ್ನು ಪುನಃ ಆರಂಭಿಸಲು ಸಾಕಷ್ಟು ಪ್ರಯತ್ನ ನಡೆದರು ಅದು ಫಲ ಕೊಡಲಿಲ್ಲ.

ಕೆಆರ್ ಮಿಲ್ ಆರಂಭಿಸುವುದರಿಂದ ಜವಳಿ ಉದ್ಯಮದ ಅಭಿವೃದ್ಧಿ ಜತೆಗೆ 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ ಎಂಬ ಕೂಗು ಕೇಳುವ ಸಮಯದಲ್ಲೇ ಕಟ್ಟಡವನ್ನೇ ರಸ್ತೆ ಅಗಲೀಕರಣಕ್ಕಾಗಿ ಕಟ್ಟಡವನ್ನೇ ನೆಲಸಮ ಮಾಡಲಾಗಿದೆ.

Scroll to Top