ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ ತಾಯಿ ಚಾಮುಂಡೇಶ್ವರಿ: ಈ ಬಾರಿ ಎಷ್ಟು ಕೋಟಿ ಆದಾಯ ಹೆಚ್ಚಳವಾಗಿದೆ ಗೊತ್ತಾ..!

ಮೈಸೂರು: ನಾಡದೇವತೆ ತಾಯಿ ಚಾಮುಂಡೇಶ್ವರಿ ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿದ್ದಾಳೆ. ಕಳೆದ ವರ್ಷಕ್ಕಿಂತ ಈ ಬಾರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದೆ.

ಹೌದು. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯದಲ್ಲಿ ಹೆಚ್ಚಳವಾಗಿದ್ದು ಕಳೆದ ವರ್ಷಕ್ಕಿಂತ ಈ ಬಾರಿ 4 ಕೋಟಿ ಹೆಚ್ಚಳವಾಗಿದೆ. 2017-18ರ ಸಾಲಿನಲ್ಲಿ 29,95,17,646 ರಷ್ಟಿದ್ದ ಆದಾಯ ಈ ಬಾರಿ ಮತ್ತಷ್ಟು ಏರಿಕೆಯಾಗಿದೆ. 2018-19 ಸಾಲಿನಲ್ಲಿ 33,30,68,162 ರೂ ಆದಾಯವಾಗಿದ್ದು, ಕೋಟಿ ಹೆಚ್ಚಳವಾಗಿದೆ.

ಈ ಬಗ್ಗೆ ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ದೇವಾಲಯದ ಆದಾಯ ಏರಿಯಾಗುತ್ತಿದೆ. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷ ಪೂಜೆ, ಹುಂಡಿ ಹಾಗೂ ಇತರ ಮೂಲಗಳಿಂದ ದೇವಾಲಯಕ್ಕೆ ಹಣ ಹರಿದು ಬರುತ್ತಿದೆ. ಹೀಗಾಗಿ 2018-19 ಸಾಲಿನಲ್ಲಿ ಆದಾಯದಲ್ಲಿ ಹೆಚ್ಚಳವಾಗಿದೆ.

ಇನ್ನು ಆದಾಯ ಹೆಚ್ಚಳದ ಹಿನ್ನೆಲೆ ಎಫ್ ಡಿ ಹಣ ಕೂಡ ಹೆಚ್ಚಳವಾಗಿದ್ದು, ದೇವಸ್ಥಾನ ಆಡಳಿತ ಮಂಡಳಿ 3 ಕೊಟಿ ಹಣ ಎಫ್ ಡಿ ಇಟ್ಟಿದೆ. ವಿಶೇಷ ಪೂಜೆ, ಹುಂಡಿ ಹಾಗೂ ಇತರ ಮೂಲಗಳಿಂದ ದೇವಾಲಯಕ್ಕೆ ಹಣ ಹರಿದು ಬರುತ್ತಿದೆ.

Scroll to Top