ಪ್ರಕೃತಿಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವಿಜಯಲಕ್ಷ್ಮಿ ಅವರ ಸಂದರ್ಶನ

ಮೈಸೂರು: ಮನುಷ್ಯನಲ್ಲದೇ ಈ ಜಗತ್ತಿನಲ್ಲಿ ಅಂದಾಜು ಒಂದು ಕೋಟಿ ಭಿನ್ನ ಜಾತಿಯ ಜೀವಗಳಿವೆ ಎನ್ನುತ್ತಾರೆ. ಅವುಗಳಲ್ಲಿ ಪಕ್ಷಿ, ಪ್ರಾಣಿ, ಚಿಟ್ಟೆ, ಗಿಡ, ಮರ,ಕೀಟ, ಕ್ರಿಮಿ… ಹೀಗೆ ಅನೇಕ ಜೀವಿಗಳಿವೆ. ಬರಿಗಣ್ಣಿಗೆ ಕಾಣದ ಜೀವಿಗಳಿಂದ ಹಿಡಿದು ಆನೆ ಅಂತ ದೈತ್ಯ ಜೀವಿಯವರೆಗೂ ಇವೆ.

ಇವುಗಳ ಬಗ್ಗೆ ವೃತ್ತಿಪರ ಅಧ್ಯಯನ, ಸಂಶೋಧನೆ ಮಾಡುವವರಲ್ಲದೇ, ಇದನ್ನು ಒಂದು ಹವ್ಯಾಸವಾಗಿ ಇಟ್ಟುಕೊಂಡಿರುವವರು ಬಹಳ ಮಂದಿಯಿದ್ದಾರೆ. ಅದರಲ್ಲೂ, ವಿಶೇಷವಾಗಿ ಕೆಲವು ಹೆಣ್ಣು ಮಕ್ಕಳು ತಮ್ಮನ್ನು ಅಳವಡಿಸಿಕೊಂಡಿದ್ದಾರೆ. ಅಂತಹ ಆಸಕ್ತರು ಮತ್ತು ಸಾಧನೆ ಮಾಡಿರುವ ಮೈಸೂರು ಮತ್ತು ಸುತ್ತಮುತ್ತಲು ವಾಸವಾಗಿರುವ ಹೆಣ್ಣು ಮಕ್ಕಳನ್ನು, ಈ ಮಹಿಳಾ ದಿನಾಚರಣೆ ಅಂಗವಾಗಿ ಪರಿಚಯಿಸುತ್ತಾ ಇದರ ಮೂಲಕ ಅವರನ್ನು ಗೌರವಿಸುವ ಒಂದು ಸಣ್ಣ ಪ್ರಯತ್ನ ವೈಲ್ಡ್ ಮೈಸೂರು ಮಾಡುತ್ತಿದೆ.

ಪ್ರಕೃತಿಯ ಸಂಕೇತವಾಗಿ, ಪ್ರಕೃತಿಯನ್ನು ಒಂದು ಹವ್ಯಾಸವಾಗಿ ಅಧ್ಯಯನ ಮಾಡುತ್ತಾ ಮತ್ತು ಪ್ರಕೃತಿಯ ಸಂರಕ್ಷಣೆಯಲ್ಲಿ ತಮ್ಮದೇ ರೀತಿಯಲ್ಲಿ ತೊಡಗಿಸಿ ಕೊಂಡಿರುವ ಮಹಿಳೆಯಲ್ಲಿ ಒಬ್ಬರಾದ ವಿಜಯಲಕ್ಷ್ಮಿ ಅವರ ಸಂದರ್ಶನ ಹೀಗಿದೆ.

Scroll to Top