
ಬೆಂಗಳೂರು: ದುಬೈನಲ್ಲಿ ವಾಸವಾಗಿರು ಅನಿವಾಸಿ ಕನ್ನಡಿಗರು ನೀಡುವ ಕನ್ನಡ ರತ್ನ ಪ್ರಶಸ್ತಿಗೆ ಈ ವರ್ಷ ಇನ್ಪೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭಾಜನರಾಗಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದುಬೈ ಕನ್ನಡಿಗರ ಮುಖ್ಯ ಸಂಚಾಲಕ ಮಲ್ಲಿಕಾರ್ಜುನ ಗೌಡ ಕರ್ನಾಟಕದ ನಾಡ ಹಬ್ಬ ೬೪ ನೇ ‘ಕನ್ನಡ ರಾಜ್ಯೋತ್ಸವ’ ವನ್ನು ದುಬೈನಲ್ಲಿರುವ ಕನ್ನಡಿಗರು ಈ ಬಾರಿ ನವೆಂಬರ್ 08 ರಂದು ಆಚರಿಸುತ್ತಿದ್ದು, ಇದು 16ನೇ ದುಬೈ ಕನ್ನಡ ರಾಜ್ಯೋತ್ಸವವಾಗಿದ್ದು ಈ ಬಾರಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಕನ್ನಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ನವೆಂಬರ್ 08ರಂದು ಸಂಜೆ 4.30 ಗಂಟೆಗೆ ದುಬೈ ಮೇದಾನ್ ನಾದ್ ಅಲ್ ಶೀಬಾದಲ್ಲಿರುವ ಹಾರ್ಟ್ ಲ್ಯಾಂಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕನ್ನಡಿಗರು ಒಟ್ಟುಗೂಡಿ ನಾಡಹಬ್ಬ ಆಚರಿಸಲಿದ್ದು ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಗೆ 2019ನೇ ಸಾಲಿನ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.
You must be logged in to post a comment.