ಪ್ರಧಾನಿ ಬ್ಯಾನರ್

ಕರ್ನಾಟಕ, ಗೋವಾ ಎನ್.ಸಿ.ಸಿ ತಂಡಕ್ಕೆ ‘ಪ್ರಧಾನಿ ಬ್ಯಾನರ್’ ಪ್ರಶಸ್ತಿ

ಪ್ರಧಾನಿ ಬ್ಯಾನರ್

ಮೈಸೂರು: ಗಣರಾಜ್ಯೋತ್ಸವದ ಅಂಗವಾಗಿ ಜ. 26ರಂದು ದೆಹಲಿಯಲ್ಲಿ ನಡೆದ ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ತಂಡಕ್ಕೆ ಈ ಬಾರಿಯ ಪ್ರತಿಷ್ಠಿತ “ಪ್ರಧಾನಿ ಬ್ಯಾನರ್” ಪ್ರಶಸ್ತಿ ಲಭಿಸಿದೆ.

ಅಲ್ಲದೆ ವಿಶೇಷವಾಗಿ  ಮೈಸೂರಿನ ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಕೆಡೆಟ್ ಎಂ.ಆರ್.ಚಂದನ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಪ್ರಧಾನಿ ಬ್ಯಾನರ್

ಇದು ರಾಜ್ಯದ ಪಾಲಿಗೆ ಹೆಮ್ಮೆಯ ಗರಿಯಾಗಿದ್ದು, ಕಳೆದ 27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದ ತಂಡ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಎನ್.ಸಿ.ಸಿ ಸೇರುವ ಪ್ರತಿಯೊಬ್ಬ ಕೆಡೆಟ್ ನ ಕನಸಿನ ಪ್ರಶಸ್ತಿ ಇದಾಗಿದ್ದು, ಇತರೆ ರಾಜ್ಯಗಳ ತಂಡಗಳನ್ನು ಹಿಂದಿಕ್ಕಿ ರಾಜ್ಯದ ಕೆಡೆಟ್ ಗಳು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಮತ್ತು ಸಂತೋಷದ ಸಂಗತಿ.

Leave a Comment

Scroll to Top