ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ರೋಹನ್ ವಿ.ಗಂಗಾಡ್ಕರ್ ಮೈಸೂರಿಗೆ ಟಾಪರ್

ಮೈಸೂರು: ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗಿದೆ. ಪ್ರೌಢಶಿಕ್ಷಣ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್‌ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶವನ್ನು ಬಿಡುಗಡೆ ಮಾಡಿದರು.

2019ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಮೈಸೂರಿಗೆ ಶೇ.80.32 ರಷ್ಟು ಫಲಿತಾಂಶ ಲಭ್ಯವಾಗಿದೆ. ಈ ಬಾರಿ ಮೈಸೂರಿಗೆ ಫಲಿತಾಂಶದಲ್ಲಿ 17ನೇ ಸ್ಥಾನ ಲಭಿಸಿದೆ.

ಐಡಿಯಲ್ ಜಾವಾ ರೋಟರಿ ಶಾಲೆಯ ವಿದ್ಯಾರ್ಥಿ ರೋಹನ್ ವಿ.ಗಂಗಾಡ್ಕರ್ 622 ಅಂಕಗಳಿಸಿ ಮೈಸೂರು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 100, ಕನ್ನಡದಲ್ಲಿ 100, ಗಣಿತದಲ್ಲಿ 99, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 98 ಅಂಕಗಳಿಸಿದ್ದು, ಒಟ್ಟು 622 ಅಂಕಗಳಿಸಿದ್ದಾರೆ. ರೋಹನ್ ವಿ.ಗಂಗಾಡ್ಕರ್ ಲಾಗೈಡ್ ಪತ್ರಿಕೆಯ ಸಂಪಾದಕರು ‌ ಹಾಗೂ ವಕೀಲರು ಆಗಿರುವ ಎಚ್.ಎನ್. ವೆಂಕಟೇಶ್ ಮತ್ತು ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಮಂಜುಳಾ ದಂಪತಿ ಪುತ್ರ.

ಮೈಸೂರಿಗೆ ಪ್ರಥಮ ಸ್ಥಾನಗಳಿಸಿರುವ ರೋಹನ್ ಗೆ ಶಾಲಾ ಪ್ರಾಂಶುಪಾಲರಾದ ಎಸ್.ಎ.ವೀಣಾ, ಅಧ್ಯಕ್ಷ ವಾಸುದೇವ ಭಟ್ ಹೂ ಗುಚ್ಛ ನೀಡಿ, ಸಿಹಿ ತಿನ್ನಿಸಿ ಅಭಿನಂದಿಸಿದರು.

ಇನ್ನು ವಿಜಯವಿಠಲ ವಿದ್ಯಾಶಾಲೆಯ ಹೆಚ್.ಕೆ.ತೇಜಸ್ 621, ನಿರಂತರ ದಿನೇಶ್ 620, ಐಡಿಯಲ್ ಜಾವಾ ರೋಟರಿ ಶಾಲೆಯ ಸ್ಕಂದ ದತ್ತ 618, ವಿಜಯವಿಠಲ ವಿದ್ಯಾಶಾಲೆಯ ಬಿ.ಚೇತನ 617, ರಾಮನಾಥ್ ಆರ್.ಭಂಡಾರ್ಕರ್ 616, ಕುಶಾಲ್ ಮಾದಪ್ಪ 609, ಎಂ.ಶಿವಾನಿ 608, ತರುಣ್ ಸಾಗರ್ 605, ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿ ಅಭಿಷೇಕ್ 604 ಗಳಿಸಿದ್ದಾರೆ.

Scroll to Top