ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಂಪನಿಯೊಂದರಿಂದ ಒಂದು ಸಾವಿರ ವೆಂಟಿಲೇಟರ್ ಖರೀದಿಗೆ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಸೋಮವಾರ ಅಧಿಕಾರಿಗಳು ಹಾಗೂ ಆರೋಗ್ಯ ಸಲಕರಣೆಗಳನ್ನು ಪೂರೈಕೆ ಮಾಡುವ ಕಂಪನಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ ಸಚಿವ ಶ್ರೀರಾಮುಲು, ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳನ್ನು ಖರೀದಿ ಮಾತುಕತೆ ನಡೆಸಿದರು.
ಈಗಾಗಿ ಮೈಸೂರಿನ ಸ್ಕಾನರ್ ರೇ ಕಂಪನಿಯಿಂದ ಒಂದು ಸಾವಿರ ವೆಂಟಿಲೇಟರ್ ಖರೀದಿಗೆ ನಿರ್ಧರಿಸಲಾಗಿದೆ. ವೆಂಟಿಲೇಟರ್ ಪೂರೈಕೆ ಕುರಿತು ಸ್ಕಾನರ್ ರೇ ಕಂಪನಿ ಆಡಳಿತ ವ್ಯವಸ್ಥಾಪಕರ ಜೊತೆ ಚರ್ಚೆ ಮಾಡಿದ್ದೆವೆ.
ವಿಡಿಯೋ ಕಾನ್ಫರೆನ್ಸ್ ನಡೆಸಿ, ಕೂಡಲೇ 1,000 ವೆಂಟಿಲೇಟರ್ ಖರೀದಿಗೆ ತೀರ್ಮಾನ ಕೈಗೊಳ್ಳಲಾಯಿತು. ಒಂದು ತಿಂಗಳ ಒಳಗೆ ವೆಂಟಿಲೇಟರ್ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದರು.