ಶತದಿನದ ದಾಖಲೆ ಬರೆಯಲಿದೆ ಕೃಷ್ಣರಾಜ ಸಾಗರ..! ಏನದು ದಾಖಲೆ..? ಈ ಸ್ಟೋರಿ ಓದಿ

ಮಂಡ್ಯ: ರೈತರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯು ನಿರ್ಮಾಣಗೊಂಡ ಬಳಿಕ ಇದೇ ಮೊದಲ ಬಾರಿಗೆ ಸತತ 96 ದಿನ ಗರಿಷ್ಠ ಮಟ್ಟದ ನೀರಿನ ಸಂಗ್ರಹ ಕಾಯ್ದುಕೊಂಡಿರುವುದು ದಾಖಲೆಯಾಗಿದೆ.

1933ರಲ್ಲಿ ಅಣೆಕಟ್ಟೆ ನಿರ್ಮಾಣಗೊಂಡಿತ್ತು. 86 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 96 ದಿನಗಳ ಕಾಲವೂ ಅಣೆಕಟ್ಟೆಯಲ್ಲಿ ಗರಿಷ್ಠ ಮಟ್ಟ 124.80 ಅಡಿ ನೀರಿನ ಸಂಗ್ರಹವಿದೆ. ಈ ವರ್ಷದಲ್ಲಿ ಆಗಷ್ಟ್ 15ರಿಂದ ನವೆಂಬರ್ 19ರವರೆಗೂ ಜಲಾಶಯ ಇದೇ ಮಟ್ಟ ಕಾಯ್ದುಕೊಂಡಿದೆ.

ಇನ್ನು 124.80 ಅಡಿಗಳ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡಿರುವ ಕೆಆರ್’ಎಸ್ ಜಲಾಶಯವು 100 ದಿನ ತಲುಪಲು ಕೇವಲ ನಾಲ್ಕು ದಿನ ಬಾಕಿ ಉಳಿದಿದೆ. ಒಳ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗದಿದ್ದಲ್ಲಿ ಇದೇ ಗರಿಷ್ಠ ಮಟ್ಟ 100 ದಿನ ದಾಖಲಿಸುವುದರಲ್ಲಿ ಸಂಶಯವಿಲ್ಲ.

Image Courtesy: Kappu Kasthuri

Scroll to Top