ಮೈಸೂರು: ಕೊರೋನಾ ವಿರುದ್ದ ಹೋರಾಡಲು ಮೈಸೂರಿನಲ್ಲಿ KSRTC ಬಸ್ಸನ್ನು ಆಧುನಿಕ ಮೊಬೈಲ್ ಫೀವರ್ ಕ್ಲಿನಿಕ್ ರೀತಿಯಲ್ಲಿ ಪರಿವರ್ತಿಸಲಾಗಿದೆ.
ಮೈಸೂರು ಜಿಲ್ಲಾಡಳಿತ ಈಗಾಗಲೇ ಮೈಸೂರು ನಗರದಲ್ಲಿ ಸುಮಾರು ಹತ್ತು ಕಡೆ ಫೀವರ್ ಕ್ಲಿನಿಕ್ ಗಳನ್ನು ಪ್ರಾರಂಭಿಸಿದೆ. ಇದೀಗ ಫಿವರ್ ಕ್ಲಿನಿಕ್ ಗಳ ಮೂಲಕ ಹೆಚ್ಚು ಜನರನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ಗ್ರಾಮಾಂತರ ವಿಭಾಗದಿಂದ ಪ್ರಯಾಣಿಕರ ಬಸ್ ನ್ನು ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಆಗಿ ಪರಿವರ್ತಿದೆ. ಇಂದು ಈ ಸೇವೆಗೆ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಚಾಲನೆ ನೀಡಿದರು.
ವೈದ್ಯಾಧಿಕಾರಿಗಳಿಗಾಗಿ ಟೇಬಲ್, ಖುರ್ಚಿ ಮತ್ತು ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಶುಶ್ರೂಷಕಿಯರಿಗಾಗಿ ಟೇಬಲ್, ಕುರ್ಚಿ, ಸ್ಟೂಲ್, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳು ಕುಳಿತುಕೊಳ್ಳಲು ಪ್ರತ್ಯೇಕ ಅಸನದ ವ್ಯವಸ್ಥೆ ಇದೆ. ರೋಗಿಗಳ ತಪಾಸಣೆಗಾಗಿ ಹಾಸಿಗೆ, ಫ್ಯಾನ್ ವ್ಯವಸ್ಥೆ ಇದೆ. ಔಷಧಿ ಇಡಲು ಔಷಧಿ ಬಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಕೈ ತೊಳೆಯಲು ಸ್ಯಾನಿಟೈಸರ್, ಸೋಪ್ ಆಯಿಲ್, ಪ್ರತ್ಯೇಕ ನೀರಿನ ಸೌಲಭ್ಯವನ್ನು ಬಸ್ಸಿನಲ್ಲಿ ಅಳವಡಿಸಲಾಗಿದೆ.