ಮಳೆಯಿಂದಾಗಿ ಕುಸಿದ ಚಾಮುಂಡಿ ಬೆಟ್ಟದ ರಸ್ತೆ

ಮೈಸೂರು: ಕಳೆದರೆಡು ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲಿ ಸುರಿಯುತ್ತಿರುವ ಮಳೆಗೆ ಚಾಮುಂಡಿ ಬೆಟ್ಟದಲ್ಲಿನ ರಸ್ತೆ ಕುಸಿದಿದೆ. ಚಾಮುಂಡಿ ಬೆಟ್ಟದಿಂದ ನಂದಿ ವಿಗ್ರಹದ ಬಳಿ ಹೋಗುವ ಮಾರ್ಗದ ತಡೆಗೋಡೆ ಕುಸಿದಿದೆ

ಚಾಮುಂಡಿ ಬೆಟ್ಟದಿಂದ ನಂದಿ ವಿಗ್ರಹದ ಬಳಿ ಹೋಗುವ ಮಾರ್ಗ ಮಧ್ಯೆ ಕೆಲವೆಡೆ ತಡೆಗೋಡೆ ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಕಡೆ ತಡೆಗೋಡೆ ಕುಸಿದಿದೆ. ತಡೆಗೋಡೆ ಕುಸಿದ ಪರಿಣಾಮ ವಾಹನ ಸವಾರರಿಗೆ, ವಾಹನ ಚಾಲಕರಿಗೆ ನಿಧಾನ ಗತಿಯಲ್ಲಿ ವಾಹನ ಚಲಾಯಿಸುವಂತೆ ಪೊಲೀಸರು ತಿಳಿಸಿದ್ದಾರೆ.

ತಡೆಗೋಡೆ ಕುಸಿತಗೊಂಡ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕೆ.ಆರ್.ಠಾಣೆಯ ಸಂಚಾರಿ ಪೊಲೀಸರು ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲು ಮುಂದಾದರಾದರೂ ಒಂದು ಬ್ಯಾರಿಕೇಡ್ ಕೂಡ ಕೆಳಕ್ಕೆ ಜಾರಿಕೊಂಡಿದೆ. ಸಂಜೆಯ ವೇಳೆ ವಾಹನ ಸವಾರರು ಜಾಗೃತೆಯಾಗಿ ವಾಹನ ಚಲಾಯಿಸುವಂತೆಯೂ ಪೊಲೀಸರು ತಿಳಿಸಿದ್ದು, ಪ್ರಾಣಾಪಾಯವಾಗದಂತೆ ಮುಂಜಾಗ್ರತೆ ವಹಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

Leave a Comment

Scroll to Top