ಮತ್ತೆ 2 ವಾರ ಲಾಕ್ ಡೌನ್ ವಿಸ್ತರಣೆ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಕೇಂದ್ರ ಸರ್ಕಾರ 2 ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸಿದೆ. ಮೇ 3ಕ್ಕೆ ಎರಡನೇ ಲಾಕ್‍ಡೌನ್ ಮುಕ್ತಾಯವಾಗಬೇಕಿತ್ತು. ಆದರೆ ಈಗ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿದೆ.

ಈ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳು ತುಸು ಭಿನ್ನವಾಗಿರಲಿವೆ. ಈ ನಿಯಮಾವಳಿಗಳೇನು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ. ಅದರಂತೆ ಹಸಿರು ವಲಯದ ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆರೆಂಜ್ ಜೋನ್​ನ ಪಟ್ಟಿಯಲ್ಲಿರುವ ಪ್ರದೇಶಗಳಿಗೂ ವಿನಾಯಿತಿಗಳನ್ನು ಕಲ್ಪಿಸಲಾಗಿದೆ. ಆದರೆ ರೆಡ್ ಜೋನ್​ನಲ್ಲಿರುವ ಪ್ರದೇಶಗಳಲ್ಲಿ ಕಠಿಣ ನಿಯಮಗಳು ಮುಂದುವರಿಯಲಿವೆ.

ಕೆಂಪು ವಲಯದಲ್ಲಿ ಕೈಗಾರಿಕೆಗೆ ಷರತ್ತು ಬದ್ಧ ಅನುಮತಿ ನೀಡಿದೆ. ಶೇ.33 ರಷ್ಟು ಉದ್ಯೋಗಿಗಳು ಮಾತ್ರ ಹಾಜರಾಗಬೇಕೆಂದು ಸೂಚಿಸಿದೆ. ಶೇ.33 ರಷ್ಟು ಉದ್ಯೋಗಿಗಳೊಂದಿಗೆ ಸರ್ಕಾರಿ ಕಚೇರಿ ತೆರೆಯಲು ಅನುಮತಿ ಸಿಕ್ಕಿದೆ.

ಕಿತ್ತಾಳೆ ವಲಯದಲ್ಲಿ ಟ್ಯಾಕ್ಸಿ ಓಡಾಟಕ್ಕೆ ಅನುಮತಿ ಸಿಕ್ಕಿದ್ದು ಒಂದು ವಾಹನಲ್ಲಿ ಇಬ್ಬರು ಮಾತ್ರ ಓಡಾಡಬಹುದು. ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ಪಡೆಯಬೇಕಾಗುತ್ತದೆ.

ಹಸಿರು ವಲಯದಲ್ಲಿ ಈಗಾಗಲೇ ಘೋಷಣೆಯಾದಂತೆ ಎಲ್ಲ ರಿಯಾಯಿತಿ ಸಿಗಲಿದೆ. ಬಸ್ಸುಗಳ ಓಡಾಟಕ್ಕೆ ಅನುಮತಿ ಸಿಕ್ಕಿದ್ದು ಶೇ.50 ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕಾಗುತ್ತದೆ. ಮೂರು ವಲಯದಲ್ಲೂ ಸಲೂನ್ ತೆರೆಯಲು ಅನುಮತಿ ನೀಡಿಲ್ಲ.

Scroll to Top