ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ, ಸಾವಿರ ರೂ ದಂಡ ವಿದಿಸಿದ ಮೈಸೂರು ನಗರ ಪಾಲಿಕೆ

ಮೈಸೂರು: ಮೈಸೂರಲ್ಲಿ ಬಯಲು ಮೂತ್ರ ಮಾಡಿದ ವ್ಯಕ್ತಿಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಕಠಿಣ ಕ್ರಮ ಕೈಗೊಂಡಿದ್ದು, ಸಾವಿರ ರೂ ದಂಡ ವಿಧಿಸಿದೆ.

ಆಟೋ ಚಾಲಕ ಚೇತನ್‌ ಎಂಬಾತ ತಿಲಕ್ ನಗರದ ವಲಯ ಕಚೇರಿ 6ರ ಬಳಿ ಮೂತ್ರ ವಿಸರ್ಜನೆ ಮಾಡಿದ್ದ. ಈ ವೇಳೆ‌ ಚೇತನ್‌ಗೆ ಬುದ್ದಿವಾದ ಹೇಳಿದ್ರೂ ಕ್ಯಾರೆ ಎನ್ನದೆ ಮೂತ್ರ ವಿಸರ್ಜನೆ‌ ಮಾಡಿದ್ದಾನೆ. ಅಲ್ಲದೆ, ಮಹಿಳಾ ಆರೋಗ್ಯ ನಿರೀಕ್ಷಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಚೇತನ್‌ನನ್ನ ಮಂಡಿ ಠಾಣೆಗೆ ಒಪ್ಪಿಸಿದ ಪಾಲಿಕೆ ಅಧಿಕಾರಿಗಳು ಸಾವಿರ ರೂ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂಬ ನಿಯಮವಿದೆ. ಆದರೆ ಬಹುತೇಕರು ಈ ನಿಯಮ ಗೊತ್ತಿದ್ದರೂ ಉಲ್ಲಂಘಿಸುತ್ತಾರೆ. ನಿಯಮ ಉಲ್ಲಂಘಿಸಿದರೆ ಯಾರು ದಂಡವೇನೂ ಹಾಕಲ್ಲ ಎಂಬ ಧೈರ್ಯದಲ್ಲಿ ಹೀಗೆ ಮಾಡುತ್ತಾರೆ. ಆದರೆ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೀಗೆ ಈ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಒಂದು ಸಾವಿರ ದಂಡ ಕಟ್ಟಿದ್ದಾನೆ.

Leave a Comment

Scroll to Top