ಮೈಸೂರು: ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನನ್ನು ಬದುಕಿಸಿಕೊಡಿ ಅಂತಾ ತಾಯಿಯೊಬ್ಬರು ಸಹಾಯಹಸ್ತ ಬೇಡಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ನಿವಾಸಿಯ ಸೋಮಶೇಖರ್ ಹಾಗೂ ಸವಿತ ದಂಪತಿಯ ಪುತ್ರ 8 ವರ್ಷದ ಸುಜನ್ ಬ್ಲೆಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ.ಕಳೆದ 6 ವರ್ಷಗಳಿಂದ ಸುಜನ್ ಎಂಬ ಪುಟ್ಟ ಹುಡುಗ ಬ್ಲೆಡ್ ಕ್ಯಾನ್ಸರ್ ಗೆ ತುತ್ತಾಗಿದ್ದಾನೆ. 1 ವರ್ಷದ ಮಗುವಾಗಿದ್ದಾಗ ಈ ಮಾರಕ ಕಾಯಿಲೆಯಿಂದ ನರಳುತ್ತಿದ್ದಾನೆ. ಸುಜನ್ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸೋಮಶೇಖರ್ ಕಾರು ಚಾಲಕ, ಸವಿತ ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ.
ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಸಹಾಯಗಾಗಿ ಅಂಗಲಾಚಿದ್ದಾರೆ. ಮಾರಕ ಕಾಯಿಲೆಗೆ ತುತ್ತಾದ ಮಗನಿಗೆ ಚಿಕಿತ್ಸೆ ಕೊಡಿಸಬೇಕೆಂದು ಇರುವ ಎಲ್ಲಾ ಆಸ್ಪತ್ರೆಗಳನ್ನು ಸುತ್ತಿದ್ದಾರೆ. ವೈದ್ಯರು ಕಾಯಿಲೆ ಗುಣಪಡಿಸುವುದಕ್ಕೆ ಹೆಚ್ಚು ಹಣ ಬೇಕಿದೆ ಎಂದಿದ್ದಾರೆ. ನಮಗೆ ಅಂತ ಇದ್ದ ಒಂದು ಮನೆಯನ್ನ ಮಾರಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಈಗ ಚಿಕಿತ್ಸೆ ಕೊಡಲು ನಮ್ಮತ್ರ ಹಣ ಇಲ್ಲ, ಯಾರಾದರೂ ನಮ್ಮ ಮಗನನ್ನು ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ಆ ತಾಯಿ, ತಂದೆ ಮಾಧ್ಯಮಗಳ ಮೂಲಕ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.
ಬಾಳಿ ಬದುಕಬೇಕಿದ್ದ ಸುಜನ್ ಇಂದು ಕಷ್ಟದ ದವಡೆಯಲ್ಲಿದ್ದಾನೆ.ಸುಜನ್ ಆದಷ್ಟು ಬೇಗ ಗುಣಮುಖವಾಗಿ ಪೋಷಕರ ಮೊಗದಲ್ಲಿ ನಗು ಅರಳಲಿ ಎಂಬುದು ನಮ್ಮ ಆಶಯ.
ನೀವು ಯಾರಾದರೂ ಸುಜನ್ ಗೆ ಸಹಾಯ ಮಾಡುವ ಮನಸ್ಸಿದ್ದರೆ ಕೆಳಗಿನ ಬ್ಯಾಂಕ್ ಖಾತೆ ಮೂಲಕ ನೀವು ಆರ್ಥಿಕ ನೆರವು ನೀಡಬಹುದು.
SUJAN. S
SBI BANK
HUNASURU BRANCH MYSORE,
A/C No 37677228194
IFSC Code:SBIN0040064
Contact Number: 96324 07322, 9483741338