ಮೈಸೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ..!

ಮೈಸೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ಹೃದಯಾಘಾತವಾಗಿದೆ. ಮೈಸೂರಿನಲ್ಲಿರುವ ಅವರ ನಿವಾಸದಲ್ಲಿಯೇ ಘಟನೆ ಸಂಭವಿಸಿದ್ದು ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನ ಬೋಗಾದಿ ರಸ್ತೆಯ ಬಳಿ ಅರ್ಜುನ್​ ಜನ್ಯ ಐಷಾರಾಮಿ ವಿಲ್ಲಾ ಒಂದನ್ನು ಖರೀದಿಸಿದ್ದರು. ಸಮಯ ಸಿಕ್ಕಾಗಲೆಲ್ಲ ಮೈಸೂರಿಗೆ ಬರುತ್ತಿದ್ದ ಜನ್ಯ ಅದೇ ವಿಲ್ಲಾದಲ್ಲಿ ಉಳಿದುಕೊಳ್ಳುತ್ತಿದ್ದರು. ನಿನ್ನೆ ಸಹ ಇದೇ ವಿಲ್ಲಾಕ್ಕೆ ಬಂದಿದ್ದು ತಡರಾತ್ರಿಯಲ್ಲಿ ಹೃದಯಾಘಾತವಾಗಿದೆ.

ಅರ್ಜುನ್ ಅವರ ಆರೋಗ್ಯದ ಬಗ್ಗೆ ಅಪೋಲೋ ಹೃದ್ರೋಗ ತಜ್ಞ ಆದಿತ್ಯ ಉಡುಪ ಪ್ರತಿಕ್ರಿಯಿಸಿ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಅವರಿಗೆ ಚಿಕಿತ್ಸೆ ನೀಡಿದಾಗ ಅವರ ಗ್ಯಾಸ್ಟ್ರಿಕ್ ಸಮಸ್ಯೆ ಸರಿ ಹೋಯಿತು. ಮಂಗಳವಾರ ರಾತ್ರಿ ಮತ್ತೆ ಅವರಿಗೆ ಇಸಿಜಿ ಮಾಡಿಸಿದಾಗ ವರದಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂತು. ಅಲ್ಲದೆ ಅರ್ಜುನ್ ಅವರಿಗೆ ಬೆನ್ನು, ಎದೆ ಹಾಗೂ ತಲೆ ನೋವು ಜಾಸ್ತಿಯಾಗಿತ್ತು. ಹಾಗಾಗಿ ಮತ್ತೆ ಇಸಿಜಿ ಮಾಡಿಸಿದ್ದೇವು ಎಂದರು.

Leave a Comment

Scroll to Top