ಮೈಸೂರು: ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣಾ 2019ಕ್ಕೆ ಅಳಿಸಲಾಗದ ಶಾಹಿ ಪೂರೈಕೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಗೆ ಬೇಡಿಕೆ ಇಟ್ಟಿದ್ದು, ಅಳಿಸಲಾಗದ ಶಾಯಿ ಸರಬರಾಜಿಗೆ ಮುಂದಾಗಿದೆ.
ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾಗಿದೆ. 543 ಲೋಕಸಭಾ ಕ್ಷೇತ್ರದಲ್ಲಿ 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಪೂರೈಕೆಗೆ ತಯಾರಿ ನಡೆಸುತ್ತಿದೆ. ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವ ಸಲುವಾಗಿ 26 ಲಕ್ಷ ಬಾಟಲಿ (ಸಣ್ಣ ಸೀಸೆ) ಶಾಯಿ ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ. ‘ಶಾಯಿಗಳನ್ನು ಒದಗಿಸುವಂತೆ ಆಯೋಗ ಕೇಳಿದ್ದು, ಇದಕ್ಕೆ ₹33 ಕೋಟಿ ವೆಚ್ಚವಾಗಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ ತಿಳಿಸಿದ್ದಾರೆ.
ಅಳಿಸಲಾಗದ ಶಾಯಿ ಉತ್ಪಾದಿಸುವ ದೇಶದ ಅಧಿಕೃತ ಸಂಸ್ಥೆ ಕರ್ನಾಟಕ ಸರ್ಕಾರದ ಒಡೆತನದ ‘ಮೈಸೂರ್ ಪೆಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್’ ಸಂಸ್ಥೆ ಮಾತ್ರ. ನಾಲ್ವಡಿ ಕೃಷ್ಣರಾಜ ಒಡೆಯರ್ 1937 ರಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಸ್ಫಾಪಿಸಿದರು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದು ಒಂದು ಸಾರ್ವಜನಿಕ ವಲಯದ ಕಂಪನಿಯಾಗಿ ಮಾರ್ಪಟ್ಟಿತು.
1962 ರಲ್ಲಿ ಅಳಿಸಲಾಗದ ಶಾಯಿ ತಯಾರಿಸಲು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯನ್ನು ಆಯ್ಕೆ ಮಾಡಲಾಯಿತು. ಭಾರತದಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಅಳಿಸಲಾಗದ ಶಾಯಿ ಪೂರೈಸಲಾಗಿತ್ತು.
ಅಂದಿನಿಂದ ಅಳಿಸಲಾಗದ ಶಾಹಿ ತಯಾರಿಸುತ್ತಾ ಬಂದಿದ್ದು ಪ್ರತಿ ಚುನಾವಣೆಗೂ ಈ ಕಾರ್ಖಾನೆಯಿಂದಲೇ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗುತ್ತಿದೆ.ಮೈಸೂರಿನ ಈ ಅಳಿಸಲಾಗದ ಶಾಯಿ ಭಾರತದಲ್ಲಿ ಅಲ್ಲದೇ ವಿದೇಶಕ್ಕೂ ರವಾನೆಯಾಗುತ್ತದೆ.
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಭಾರತ ಚುನಾವಣಾ ಆಯೋಗದ ವಿಶ್ವಾಸಗಳಿಸಿರುವ ಹಿನ್ನಲೆ ದಶಕಗಳಿಂದಲೂ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಪೂರೈಕೆ ಮಾಡುತ್ತಾ ಬಂದಿದ್ದು ಈ ಬಾರಿಯೂ ಪೂರೈಕೆ ಮಾಡಲು ಸಜ್ಜಾಗಿದೆ.
ಕಳೆದ ಜನವರಿಯಿಂದ ಅಳಿಸಲಾದಗ ಶಾಯಿ ತಯಾರಾಗುತ್ತಿದೆ,ಸಾಮಾನ್ಯವಾಗಿ ಮತದಾರನ ಬೆರಳಿನ ಉಗುರಿನ ಮೇಲೆ ಶಾಯಿ ಹಾಕಲಾಗುತ್ತದೆ.ಅಳಿಸಲಾಗದ ಶಾಯಿ ಸುಮಾರು 20 ದಿನಗಳ ಕಾಲ ಬೆರಳಿಗಳ ಮೇಲೆ ಉಳಿಯುತ್ತದೆ.
ಅಳಿಸಲಾಗದ ಶಾಯಿಯನ್ನು ಹಂತ ಹಂತವಾಗಿ ಭಾರತ ಚುನಾವಣಾ ಆಯೋಗದ ಸುಪರ್ಧಿಗೆ ಒಪ್ಪಿಸಲಾಗುತ್ತಿದೆ. 2014ರ ಚುನಾವಣೆಯಲ್ಲಿ 21.5 ಲಕ್ಷ ಬಾಟಲಿಗಳನ್ನು ಚುನಾವಣಾ ಆಯೋಗ ಬಳಸಿತ್ತು. ಈ ಬಾರಿ 4.5 ಲಕ್ಷ ಹೆಚ್ಚುವರಿ ಸೀಸೆ ಒದಗಿಸಲು ಸೂಚಿಸಲಾಗಿದೆ.