ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಬೀಡದ ಕೊರಾನಾ ಮಹಾ ಮಾರಿ. ಚಾಮುಂಡೇಶ್ವರಿ ದರ್ಶನ ಪಡೆಯಲು ಬಂದ ಭಕ್ತರಿಗೆ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.
ನಾಡದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಸ್ಯಾನಿಟೈಸರ್ ನೀಡಿ ಕೈ ಸ್ವಚ್ಚಗೊಳಿಸಿದ ನಂತರ ಒಳಗೆ ಬಿಡಲಾಗುತ್ತಿದೆ.
ಶುಕ್ರವಾರವಾದ ಇಂದು ಜನದಟ್ಟಣೆಯಾಗುವ ಹಿನ್ನೆಲೆ ದೇವಾಲಯದ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ. ದೇವಾಲಯದ ಆಡಳಿತ ಮಂಡಲಿ ವಿಐಪಿ, ವಿಶೇಷ ದರ್ಶನ ರದ್ದುಗೊಳಿಸಿದೆ. ಹತ್ತತ್ತು ಮಂದಿಯನ್ನ ಮಾತ್ರ ದರ್ಶನಕ್ಕೆ ಬಿಡಲಾಗುತ್ತಿದೆ.