ನವದೆಹಲಿ: ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಈ ಬಾರಿ ಮೈಸೂರು 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕಳೆದ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಈ ಬಾರಿ ಟಾಪ್ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ.
ದೇಶದ ಸ್ವಚ್ಛ ನಗರ ಪಟ್ಟಿಯನ್ನು ಇಂದು ನವದೆಹಲಿಯಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಬಿಡುಗಡೆ ಮಾಡಿದರು.
ಕಳೆದ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಈ ಬಾರಿ ಟಾಪ್ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ಅಲ್ಲದೆ ಕಸ ಮುಕ್ತ ನಗರದಲ್ಲಿ ಮೈಸೂರಿಗೆ 5 ಸ್ಟಾರ್ ರೇಟಿಂಗ್ ದೊರೆತಿದೆ.
ನಗರ ಪಾಲಿಕೆ ಅಧಿಕಾರಿಗಳು, ಪೌರ ಕಾರ್ಮಿಕರು, ಮೈಸೂರಿನ ನಾಗರೀಕರು ಮೊದಲ ಸ್ಥಾನಕ್ಕಾಗಿ ಸಾಕಷ್ಟು ಶ್ರಮ ವಹಿಸಿ ಸ್ವಚ್ಚತೆಗೆ ಹೆಚ್ಚಿನ ಹೊತ್ತು ನೀಡಿದ್ದರೂ, ಈ ಬಾರಿ ಮೊದಲ ಸ್ಥಾನ ಬರಲಿಲ್ಲ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಎರಡು ಸ್ಥಾನ ಮುಂದೆ ಹೋಗಿದ್ದು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಿದೆ.
Proud of our mcc worker’s because of their efforts only we got this award. Salute to those persons who are contribute their efforts.