ಸರಳ ದಸರಾಗೆ ಡಾ. ಮಂಜುನಾಥ್​ರಿಂದ ಚಾಲನೆ: ಕೊರೊನಾ ವಾರಿಯರ್ಸ್​ಗೆ ಸನ್ಮಾನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಲಾಯಿತು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವು ಮೂಲಕ 2020ರ ದಸರಾಗೆ ಚಾಲನೆ ನೀಡಲಾಗಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಅವರು ದಸರಾ ಉದ್ಘಾಟನೆ ಮಾಡಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದರೊಂದಿಗೆ ಹತ್ತು ದಿನಗಳ ಸರಳಾ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಕೋವಿಡ್ ಕಾರಣದಿಂದ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ದಸರಾ ಸಂಬಂಧ ಎಲ್ಲಾ ಕಾರ್ಯಕ್ರಮಗಳನ್ನು ಲೈವ್‌ ಮುಖಾಂತರ ನೀಡಲಾಗುತ್ತಿದೆ.

ಇನ್ನು ದಸರಾ ಉದ್ಘಾಟನಾ ವೇದಿಕೆಯಲ್ಲಿ ಆರು ಕರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಯಿತು. ಸಿಎಂ ಯಡಿಯೂರಪ್ಪ ಹಾಗೂ ದಸರಾ ಉದ್ಘಾಟಕ ಡಾ.ಸಿ.ಎನ್‌.ಮಂಜುನಾಥ್ ಅವರು ಸನ್ಮಾನ ಮಾಡಿದರು.

ಸನ್ಮಾನಿತರು

1. ಡಾ.ನವೀನ್ ಟಿ.ಆರ್.- ವೈದ್ಯಾಧಿಕಾರಿ.

2. ರುಕ್ಮಿಣಿ – ಹಿರಿಯ ಸ್ಟಾಫ್ ನರ್ಸ್.

3. ಕುಮಾರ್ ಪಿ., ಪೊಲೀಸ್ ಕಾನ್ ಸ್ಟೇಬಲ್.

4. ಮರಗಮ್ಮ- ಪೌರಕಾರ್ಮಿಕರು.

5. ನೂರ್ ಜಾನ್ – ಆಶಾ ಕಾರ್ಯಕರ್ತೆ.

6. ಆಯೂಬ್ ಅಹ್ಮದ್ – ಸಮಾಜ ಸೇವಕರು.

Scroll to Top