ಮೈಸೂರು: ದಸರಾ ಫಲಪುಷ್ಪ ಪ್ರದರ್ಶನವನ್ನು ಕರ್ಜನ್ ಪಾರ್ಕ್ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಸೆ.29ರಿಂದ ಅ.13ರವರೆಗೆ ಕುಪ್ಪಣ್ಣ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಸಾರ್ವಜನಿಕರು ಬೆಳೆಸಿರುವ ಆರ್ಕಿಡ್ಸ್, ಅಂಥೋರಿಯಂ, ಬೋನ್ಸಾಯಿ ಗಿಡಗಳನ್ನು ಉದ್ಯಾನವನದಲ್ಲಿ ಪ್ರದರ್ಶಿಸಲು ಅವಕಾಶವಿದ್ದು, ಸಂಘ ಸಂಸ್ಥೆಗಳು, ನಾಗರೀಕರು, ನರ್ಸರಿಯವರು ಸೆ.5ರೊಳಗೆ ತಮ್ಮ ಹೆಸರನ್ನು ಕರ್ಜನ್ ಪಾರ್ಕ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.8970115883 ಸಂಪರ್ಕಿಸಬಹುದು.