ಮೈಸೂರು: ನಂಜನಗೂಡು ಜ್ಯುಬಿಲಿಯೆಂಟ್ ಕಾರ್ಖಾನೆ ಕಾರ್ಮಿಕರ ಕೊರೋನಾ ವೈರಸ್ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಸೋಂಕಿತರ ಸಂಪರ್ಕ ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆ ಮಾಡಲೇಬೇಕು. ಸದ್ಯ ಪ್ರೈಮರಿ ಸಂಪರ್ಕ ಹೊಂದಿದ 223 ಜನರ ಸ್ಯಾಂಪಲ್ ಪರೀಕ್ಷೆ ನಡೆಯಬೇಕಿದೆ. ನಂಜನಗೂಡಿನ 19 ಕೇಸ್ ಪ್ರೈಮರಿ ಸಂಪರ್ಕದ ಹುಡುಕಾಟವು ಮುಂದುವರೆದಿದೆ. ಸಂಪರ್ಕಿತರ ಸಂಖ್ಯೆ ನೂರೂ ಆಗಬಹುದು, ಸಾವಿರವೂ ಆಗಬಹುದು ಎಂದು ತಿಳಿಸಿದರು.
ಎಲ್ಲ ಸ್ಯಾಂಪಲ್ ಪರೀಕ್ಷೆಗೆ 12 ದಿನ ಕಳೆಯಬೇಕು. ಇಲ್ಲವಾದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ. 12 ದಿನ ಕಳೆದ ಮೇಲೆಯೆ ಸೋಂಕಿನ ನಿಖರ ಮಾಹಿತಿ ತಿಳಿಯಲಿದೆ. ನಂಜನಗೂಡು ಪ್ರಕರಣದ ಇನ್ನೂ ನೂರಾರು ಸ್ಯಾಂಪಲ್ ಪರೀಕ್ಷೆ ಮಾಡಬೇಕಿದೆ. ಎಲ್ಲರ ವರದಿ ಬಂದ ನಂತರ ಮಾಹಿತಿ ನೀಡುತ್ತೇವೆ ಎಂದರು.